ವಿಟ್ಲ: ಖಾಸಗಿ ಶಾಲೆಯೊಂದರ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ ಛದ್ಮವೇಷ ಸ್ಪರ್ಧೆಯಲ್ಲಿ ಬಾಲಕಿಯೊಬ್ಬಳು ಕಾಂತಾರ ಚಿತ್ರದ ದೈವದ ವೇಷವನ್ನು ಹಾಕಿದ್ದು, ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
‘ಎಲ್ಲಿಗೆ ಬಂತು ದೈವ, ದೇವರುಗಳ ದುಸ್ಥಿತಿ.!!??, ಎಂದು ದೈವ ಭಕ್ತರು ಛದ್ಮವೇಷ ಸ್ಪರ್ಧೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ದೈವರಾಧಾನೆಗೆ ತುಳುನಾಡಿನಲ್ಲಿ ವಿಶೇಷ ಸ್ಥಾನವಿದೆ. ದೈವಪಾತ್ರಿಗಳಿಗೆ ಅವರದ್ದೆ ಆದ ಕಟ್ಟುಪಾಡುಗಳು, ನಿಯಮಾವಳಿಗಳಿವೆ. ಯಾರು ಬೇಕಾದರೆ ಅವರು ದೈವದ ವೇಷ ಧರಿಸುವಂತಿಲ್ಲ ಇಷ್ಟೆಲ್ಲಾ ಇದ್ದರೂ ಕೆಲವರು ಇದನ್ನು ಕಡೆಗಣಿಸಿ ತಮಗೆ ಬೇಕಾದಾಗ ದೈವ ವೇಷ ಧರಿಸುವುದು ಶೋಭೆಯಲ್ಲ., ಇದು ದೈವಾರಾಧನೆಗೆ ಮಾಡಿದ ಅಪಮಾನವಾಗುತ್ತದೆ ಎಂದು ದೈವ ಭಕ್ತರು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.
ಬಾಲಕಿಯ ಛದ್ಮವೇಷದ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಬಾಲಕಿ ದೈವದ ವೇಷ ಧರಿಸಿದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸುವುದರ ಜೊತೆಗೆ ಹಲವರು ಶಾಲಾ ಶಿಕ್ಷಕ ವೃಂದಕ್ಕೂ ಸಾಮಾನ್ಯ ಜ್ಞಾನ ಇಲ್ಲದಾಯಿತೇ..!!?? ಎಂದೆಲ್ಲಾ ಪ್ರಶ್ನಿಸುತ್ತಿದ್ದಾರೆ. ಈ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಲಿದೆ..

























