ವಿಟ್ಲ: ಹಳೆ ಬಸ್ ನಿಲ್ದಾಣದಲ್ಲಿ ಟೈಮಿಂಗ್ಸ್ ವಿಚಾರದಲ್ಲಿ ಎರಡು ಖಾಸಗಿ ಬಸ್ ಗಳ ಚಾಲಕರು ಸಾರ್ವಜನಿಕರು ಹೊಡೆದಾಡಿಕೊಂಡಿದ್ದು, ಇಬ್ಬರು ಚಾಲಕರನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಎರಡು ಖಾಸಗಿ ಬಸ್ ಚಾಲಕರ ನಡುವೆ ಟೈಮಿಂಗ್ಸ್ ವಿಚಾರದಲ್ಲಿ ಹೊಡೆದಾಟ ನಡೆದಿತ್ತು.
ಇಂದು ಮಹೇಶ್ ಮತ್ತು ಮಣಿಕಂಠ ಬಸ್ ಚಾಲಕರು ಗಲಾಟೆ ನಡೆಸಿದ್ದಾರೆ. ಮಹೇಶ್ ಬಸ್ ಚಾಲಕ ಮಣಿಕಂಠ ಬಸ್ ಚಾಲನ ಮೇಲೆ ಹಲ್ಲೆ ನಡೆಸುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ವಿಟ್ಲ ಪೊಲೀಸರು ಇಬ್ಬರು ಚಾಲಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರತಿನಿತ್ಯ ಖಾಸಗಿ ಬಸ್ ಚಾಲಕರ ರಂಪಾಟದಿಂದ ಜನರು ರೋಸಿ ಹೋಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.


























