ಪುತ್ತೂರು: ಜೇಸಿಐ ಝೋನ್ XV ನ ‘Zone Governing Board 2023’ ಕಾರ್ಯಕ್ರಮವು ಡಿ.10 ರಂದು ಸಂಜೆ 6.30ಕ್ಕೆ ದರ್ಬೆಯ ಫಿಲೋಮಿನಾ ಕಾಲೇಜಿನ ಸಿಲ್ವರ್ ಜ್ಯೂಬ್ಲಿ ಹಾಲ್ ನಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಸುಳ್ಯ ಪಂಬೆತ್ತಾಡಿ ಪ್ರೈಮರಿ ಅಗ್ರಿಕಲ್ಚರ್ ಕೋ-ಆಪರೇಟರ್ ಸೊಸೈಟಿಯ ಅಧ್ಯಕ್ಷರಾದ ಮಾಧವ ಗೌಡ ರವರು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜೇಸಿಐ ಇಂಡಿಯಾದ ಮಾಜಿ ಎನ್.ವಿ.ಪಿ ಜೇಸಿಐ ಸೆನ್ ಸದಾನಂದ ನಾವಡ ರವರು ಆಗಮಿಸಿಲಿದ್ದಾರೆ. ಕಾರ್ಯಕ್ರಮವು ಜೇಸಿಐ ಇಂಡಿಯಾದ ಝೋನ್ XV ಅಧ್ಯಕ್ಷರಾದ ಜೇಎಫ್ಡಿ ಪುರುಷೋತ್ತಮ ಶೆಟ್ಟಿ ರವರ ಮುಂದಾಳತ್ವದಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..



























