ಬಂಟ್ವಾಳ: ಪುಂಜಾಲಕಟ್ಟೆ ಪೊಲೀಸರ ದಕ್ಷತೆ ಹಾಗೂ ಪ್ರಾಮಾಣಿಕತೆ ಬಗ್ಗೆ ಹಲವಾರು ವರ್ಷಗಳಿಂದ ನಾವು ಕೇಳುತ್ತಿದ್ದೇವೆ. ಅಂತಹ ಪೊಲೀಸರ ಬಗ್ಗೆ ಆರೋಪ ಹೊರಿಸುವುದು ನಿರರ್ಥಕ ಹಾಗೂ ಅರ್ಥಹೀನವಾಗಿದ್ದು, ಇದರ ವಿರುದ್ಧ ಪುಂಜಾಲಕಟ್ಟೆ ಸಾರ್ವಜನಿಕರು ಪ್ರತಿಭಟನೆಗೆ ಸಿದ್ಧರಾಗಿದ್ದಾರೆ ಎಂದು ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ರವರು ಸಾರ್ವಜನಿಕ ರವರ ಪರವಾಗಿ ತಿಳಿಸಿದ್ದಾರೆ.
ನ್ಯಾಯವಾದಿ ಕುಲ್‌ದೀಪ್ ಶೆಟ್ಟಿ ಹಲ್ಲೆ ಆರೋಪದಲ್ಲಿ ಪುಂಜಾಲಕಟ್ಟೆ ಎಸ್.ಐ. ಸುತೇಶ್ ರನ್ನು ವರ್ಗಾವಣೆ ಮಾಡಿರುವ ಕಾರಣಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು ಮಂಗಳೂರು ಐಜಿಪಿ ಕಚೇರಿಗೆ ದೂರು ನೀಡಿ ಬಳಿಕ ಪ್ರತಿಭಟನೆ ನಡೆಸಲಾಗುವುದು ಎಂದು ನಿರ್ಧರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಎಂ ತುಂಗಪ್ಪ ಬಂಗೇರ ರವರು ‘ಇಲ್ಲಿನ ಎಸ್.ಐ ಅವರನ್ನು ಆಡಳಿತ ವೈಫಲ್ಯ ಕಾರಣ ನೀಡಿ ವರ್ಗಾವಣೆ ನಡೆಸಿರುವುದು ಸರಿಯಾದ ಕ್ರಮವಲ್ಲ. ಘಟನೆಗೆ ಸಂಬಂಧಿಸಿದಂತೆ ಸರಿಯಾದ ತನಿಖೆ ನಡೆಸಿ ತಪ್ಪು ಸಾಬೀತಾದರೆ ಬಳಿಕ ಅವರನ್ನು ವರ್ಗಾವಣೆ ಮಾಡಬೇಕಿತ್ತು. ಈ ರೀತಿಯಲ್ಲಿ ಯಾರದೋ ಒತ್ತಡಕ್ಕೆ ಮಣಿದು ವರ್ಗಾವಣೆ ಮಾಡಿದ್ದು, ಇದು ನ್ಯಾಯವಲ್ಲ ಎಂದು ಅವರು ಆರೋಪಿಸಿದ್ದಾರೆ.
ವಕೀಲ ವೃತ್ತಿಯಲ್ಲಿರುವವರು ಅವರ ಪ್ರಾಮಾಣಿಕತೆಗನುಗುಣವಾಗಿ
ಕಾರ್ಯಾಚರಿಸಬೇಕು. ಅವರು ಕೂಡಾ ಗೂಂಡಾಗಿರಿ ಮಾಡಿದರೆ ಮುಖ ನೋಡದೆ ಕೇಸ್ ಜಡಿದು ಜೈಲಿಗಟ್ಟುವುದಾದರೆ ಪೊಲೀಸರ ದಕ್ಷತೆ ಹಾಗೂ ಪ್ರಾಮಾಣಿಕತೆ ಸ್ಪಷ್ಟವಾಗಿ ಎದ್ದು ಕಾಣುವುದರಲ್ಲಿ
ಅನುಮಾನವಿಲ್ಲ. ಅಂತಹ ದಕ್ಷ ಪೊಲೀಸ್ ಅಧಿಕಾರಿಗಳ ಮೇಲೆ
ವಕೀಲರು ಅವರ ಶೌರ್ಯದಿಂದ ಸುಳ್ಳಾರೋಪ ಹೊರಿಸಿ ಪೊಲೀಸರನ್ನು ಮೂಲೆಗುಂಪು ಮಾಡುವುದಾದರೆ ನಾಡಿನ ಪ್ರಬುದ್ಧ ಪ್ರಜ್ಞಾವಂತ ನಾಗರಿಕರು ಸುಮ್ಮನಿರಲಾರರು ಎಂದರು.

ಪ್ರಾಮಾಣಿಕ ಅಧಿಕಾರಿಗಳಿಗೆ ಕೆಲಸ ನಿರ್ವಹಿಸಲು ಅವಕಾಶ ನೀಡಬೇಕಾದದ್ದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದ್ದು, ಅದಕ್ಕೆ ಯಾರೂ ತಡೆಯಾಗಬಾರದು. ಆವಾಗ ಮಾತ್ರ ನಾಡಿನಲ್ಲಿ ಶಾಂತಿ ನೆಮ್ಮದಿ ಸ್ಥಾಪನೆಯಾಗಲು ಸಾಧ್ಯ. ಅದಕ್ಕಾಗಿ ಜನಪ್ರತಿನಿಧಿಗಳು ಮೇಲಧಿಕಾರಿಗಳು ಕಾರಣವಾಗಬೇಕು. ಪ್ರಕರಣ ತಿರುಚಿದ್ದಾರಾ..!!??? ಹಾಗಲ್ಲದಿದ್ದಲ್ಲಿ ಎಸ್.ಐ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವನ್ನು ಈತ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಂದರ್ಭದಲ್ಲಿ ಒಬ್ಬ ವಕೀಲನಾಗಿ ಜಡ್ಜ್ ಮುಂದೆ
ಯಾಕೆ ಹೇಳಿಲ್ಲ. ಪೊಲೀಸರು ಹಲ್ಲೆ ನಡೆಸಿದರೆ ಠಾಣೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿಲ್ವ.
ಸಾಕ್ಷಿ ಸಮೇತವಾಗಿ ವಕೀಲರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯ ಕೇಳಬಹುದಿತ್ತು. ಅಲ್ಲಿ ಅವರಿಗೆ ನ್ಯಾಯ ಸಿಗುವುದಿಲ್ಲಾ ಅಂತಾ ಗೊತ್ತಿತ್ತಾ..!!?? ಸಾರ್ವಜನಿಕರಿಗೆ ನ್ಯಾಯಾಲಯದ ಮೂಲಕ ನ್ಯಾಯ ಕೊಡಿಸುವ ವಕೀಲರುಗಳೇ
ಬೀದಿಗಿಳಿದು ಹೋರಾಟ ನಡೆಸಿದರೆ ಏನರ್ಥ.?? ಜಮೀನು ವಿಚಾರದಲ್ಲಿ ಉಂಟಾದ ಖಾಸಗಿ ಸಂಘರ್ಷದಲ್ಲೂ ಸಂಘಟನೆ ಸೇರಿಕೊಂಡಾಗ, ಸತ್ಯಾಂಶವನ್ನು ತಿಳಿದು ಕೊಂಡಿಲ್ವಾ..!!?? ವೈದ್ಯಕೀಯ ತಪಾಸಣೆಯಲ್ಲಿ ಹಲ್ಲೆಯ ಬಗ್ಗೆ ದಾಖಲಿಸಲ್ವಾ..!!?? ಈ ಪ್ರಕರಣದ ತನಿಖೆ ನಡೆಸದೆ, ಏಕಾಏಕಿ ವರ್ಗಾವಣೆ ಮಾಡಿದ ಉದ್ದೇಶ ಏನು..!?? ಎಂದೆಲ್ಲಾ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಅಷ್ಟೇ ಅಲ್ಲದೇ ಎಸ್.ಐ ಸುತೇಶ್ ರನ್ನು ಡಿಢೀರ್ ವರ್ಗಾವಣೆ ಮಾಡಿದ್ದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಪ್ರಾರಂಭವಾಗಿದ್ದು, ‘I stand with si suthesh kumar’, ‘I stand with justice’ ಎಂದೆಲ್ಲಾ ಬರೆದ ಪೋಸ್ಟರ್ ವೈರಲ್ ಆಗುತ್ತಿದೆ..


























