ನವದೆಹಲಿ : ದೇಶದಲ್ಲಿ ಕೋವಿಡ್-19 ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಸರ್ವೇ(ಎಎಸ್‌ಐ) ಅಡಿ ಬರುವ ಎಲ್ಲ ಸ್ಮಾರಕಗಳು, ವಸ್ತು ಸಂಗ್ರಹಾಲಯಗಳು ಹಾಗೂ ಇತರೆ ಪ್ರವಾಸಿ ತಾಣಗಳನ್ನು ತತ್‌ಕ್ಷಣದಿಂದಲೇ ಮುಚ್ಚುವಂತೆ ಕೇಂದ್ರ ಸರ್ಕಾರ ಏ.15 ರಂದು ಆದೇಶ ಹೊರಡಿಸಿದೆ.
ಮೇ 15ರವರೆಗೂ ಈ ಆದೇಶ ಜಾರಿಯಲ್ಲಿರಲಿದೆ. ಕೇಂದ್ರ ಸರ್ಕಾರದಿಂದ ಸಂರಕ್ಷಿಸಲ್ಪಟ್ಟ ಎಲ್ಲ ಸ್ಮಾರಕಗಳನ್ನೂ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ಸಂಸ್ಕೃತಿ ಸಚಿವ ಪ್ರಹ್ಲಾದ್ ಪಟೇಲ್ ಟ್ವೀಟ್ ಮಾಡಿದ್ದಾರೆ. ದೇಶದಲ್ಲಿ ಒಟ್ಟು3693 ಸ್ಮಾರಕಗಳು ಮತ್ತು 50ವಸ್ತು ಸಂಗ್ರಹಾಲಯಗಳು ಕೇಂದ್ರ ಸರ್ಕಾರದಿಂದ ಸಂರಕ್ಷಿಸಲ್ಪಟ್ಟ ಪಟ್ಟಿಯಲ್ಲಿದೆ.