ಮೂಡುಬಿದಿರೆ: ಕಾರು ಮತ್ತು ಖಾಸಗಿ ಬಸ್ ನ ನಡುವೆ ಭೀಕರ ಅಪಘಾತ ನಡೆದು 2 ವರ್ಷದ ಮಗು ಸಹಿತ ದಂಪತಿಗಳು ಸಾವಿಗೀಡಾದ ಘಟನೆ ಡಿ.10 ರ ಬೆಳಗ್ಗೆ ಉಡುಪಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಜಗೋಳಿ ಸಮೀಪದ ನೆಲ್ಲಿಕಾರು ಗ್ರಾ.ಪಂ.ವ್ಯಾಪ್ತಿಯ ಮೈನೇರು ಬಳಿ ನಡೆದಿದೆ.

ಭೀಕರ ಅಪಘಾತದ ಪರಿಣಾಮ ಗಂಡ ಹೆಂಡತಿ ಮಗು ಸಹಿತ ಮೂರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಮೃತಪಟ್ಟವರೆಲ್ಲ ಆಂಧ್ರ ಮೂಲದವರು ಎಂದು ಗುರುತಿಸಲಾಗಿದೆ.

ಬೆಂಗಳೂರಿನಲ್ಲಿ ವಾಸವಾಗಿದ್ದ ಆಂಧ್ರದ ಕುಟುಂಬ ಧರ್ಮಸ್ಥಳಕ್ಕೆ ಭೇಟಿ ನೀಡಿ ಅಲ್ಲಿಂದ ಶೃಂಗೇರಿ ಹೋಗುತ್ತಿದ್ದ ಸಂದರ್ಭ ನೆಲ್ಲಿಕಾರು ಸಮೀಪ ಈ ಘಟನೆ ನಡೆದಿದೆ.
ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ತನಿಖೆ ಆರಂಭಿಸಿದ್ದಾರೆ. ಮೂವರ ಮೃತದೇಹಗಳನ್ನು ಸಾರ್ವಜನಿಕರ ಸಹಕಾರದೊಂದಿಗೆ ತೆಗೆಯಲಾಗಿದೆ. ದಂಪತಿಗಳು ಮೂವತ್ತು ವರ್ಷದೊಳಗಿನವರೆಂದು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.


























