ಬಂಟ್ವಾಳ: ಶ್ರೀ ಮಹಾಮ್ಮಾಯಿ ದೇವಿ ಹಾಗೂ ಪರಿವಾರ ದೈವಗಳ ಟ್ರಸ್ಟ್ ರಿ. ವತಿಯಿಂದ ಶ್ರೀ ಕ್ಷೇತ್ರ ಕಟ್ಟತ್ತಿಲ ಶ್ರೀ ಮಹಾಮ್ಮಾಯಿ ದೇವಿಯ ದೇವಸ್ಥಾನದ ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶೋತ್ಸವದ ಪ್ರಯುಕ್ತ ‘ನಮ್ಮ ನಡಿಗೆ.. ಅಮ್ಮನವರ ಕಡೆಗೆ’ ಕಾರ್ಯಕ್ರಮ ಡಿ.11 ರಂದು ನಡೆಯಲಿದೆ.
ಡಿ.11 ರಂದು ಮಧ್ಯಾಹ್ನ 2.30 ರಿಂದ ಸಾಲೆತ್ತೂರು ಬಸ್ ನಿಲ್ದಾಣದ ಪರಿಸರದಿಂದ ಶ್ರೀ ಕ್ಷೇತ್ರ ಕಟ್ಟತ್ತಿಲಕ್ಕೆ ವಾಹನ ಜಾಥಾ ನಡೆಯಲಿದೆ.
ಸಂಜೆ 3 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ರವರು ಆಶೀರ್ವಚನ ನೀಡಲಿದ್ದಾರೆ. ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..





























