ಭಾರತ ಸರಕಾರದ ಮಹತ್ತ ಮಹತ್ವಾಕಾಂಕ್ಷೆಯ ಅಗ್ನಿಪಥ್ ಯೋಜನೆಯ ಅಗ್ನಿ ವೀರನಾಗಿ ಆಯ್ಕೆಯಾದ ಸಚಿನ್ ರನ್ನು ಭಾರತೀಯ ಜನತಾ ಪಾರ್ಟಿಯ ವಿಟ್ಲಪಡ್ನೂರು ಮಹಾ ಶಕ್ತಿ ಕೇಂದ್ರದ ವತಿಯಿಂದ ವೀರಕಂಭ ಗ್ರಾಮದ ಮೈರ ಕೂಸಮ್ಮ ವಾಸಪ್ಪ ಗೌಡ ರವರ ಮನೆಯಲ್ಲಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಕ್ಷೇತ್ರ ಸಮಿತಿ ಪ್ರದಾನ ಕಾರ್ಯದರ್ಶಿ ರವೀಶ ಶೆಟ್ಟಿ ಕರ್ಕಳ ,ಮಹಾ ಶಕ್ತಿ ಕೇಂದ್ರ ವಿಟ್ಲ ಪಡ್ನೂರು ಇದರ ಅಧ್ಯಕ್ಷರಾದ ಸನತ್ ಕುಮಾರ್ ರೈ, ಪ್ರಧಾನ ಕಾರ್ಯದರ್ಶಿ ಅರವಿಂದ ರೈ ಮೂರ್ಜೆಬೆಟ್ಟು, ಮಂಡಲ ಮಾಧ್ಯಮ ಪ್ರಮುಖರಾದ ದೇವಿಪ್ರಸಾದ್ ಶೆಟ್ಟಿ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಗೀತಾ ಚಂದ್ರಶೇಖರ್, ಮಹಿಳಾ ಮೊರ್ಚಾ ಬಂಟ್ಟಾಳ ಇದರ ಪ್ರಧಾನ ಕಾರ್ಯದರ್ಶಿಯಾದ ಸೀಮಾ ಮಾಧವ್, ವಿಟ್ಲ ಪಡ್ನೂರು ಪಂಚಾಯತ್ ಉಪಾಧ್ಯಕ್ಷರಾದ ನಾಗೇಶ್ ಶೆಟ್ಟಿ, ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಪೂಜಾರಿ, ಗ್ರಾಮ ಪಂಚಾಯತ ಸದಸ್ಯರಾದ ಜಯಪ್ರಸಾದ್ ,ಸಂದೀಪ್ ,ಜಯಂತಿ ಜನಾರ್ಧನ್ ,ಮಿನಾಕ್ಷಿ ಸುನಿಲ್ , ಬೂತ್ ಸಮಿತಿ ಅದ್ಯಕ್ಷರಾದ ಪ್ರಕಾಶ್, ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ಗಣೇಶಕೋಡಿ, ರಮೇಶ್ ಮೈರ ಪ್ರಮುಖರಾದ ಶ್ರೀಧರ ಕೇಪುಳಕೋಡಿ, ಪದ್ಮನಾಭ ಗೌಡ ಮೈರಾ, ಅನಂತಾಡಿ ಪಂಚಾಯತ್ ಸದಸ್ಯರಾದ ಸುಜಾತಾ, ನಾಗೇಶ್ ಭಂಡಾರಿ ಕರಿಂಕ ಮೊದಲಾದವರು ಉಪಸ್ಥಿತರಿದ್ದರು .





























