ಪುತ್ತೂರಿನ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆ ಹಾಗೂ ಖಾಸಗಿ ಉದ್ಯೋಗಗಳ ನೇರ ಸಂದರ್ಶನ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ಪರಿಚಯಿಸುತ್ತಿರುವ ಪ್ರಾಕ್ಟಿಕಲ್ ಅಕೌಂಟ್ಸ್ , ಟ್ಯಾಕ್ಸ್ ಮತ್ತು ಹೆಚ್.ಆರ್ ಉದ್ಯೋಗ ತರಬೇತಿಯನ್ನು ಪ್ರಾರಂಭಿಸಲಾಗುತ್ತಿದ್ದು ಪಿ.ಯು.ಸಿ.ಯಿಂದ ಸ್ನಾತಕೋತ್ತರ ಪದವಿವರೆಗಿನ ವಿದ್ಯಾರ್ಥಿಗಳು ಮತ್ತು ಓದು ಮುಗಿಸಿರುವವರು ಈ ತರಬೇತಿಯನ್ನು ಸದುಪಯೋಗ ಪಡಿಸಿಕೊಂಡು ಅಕೌಂಟೆಂಟ್/ ರಿಸೆಪ್ಷನಿಸ್ಟ್/ ಅಡ್ಮಿನ್/ ಹೆಚ್.ಆರ್/ ಆಫಿಸ್ ಅಸಿಸ್ಟೆಂಟ್ ಹುದ್ದೆಯನ್ನು ಪಡೆದುಕೊಳ್ಳಬಹುದಾಗಿದೆ.

ಬಹಳಷ್ಟು ವಿದ್ಯಾರ್ಥಿಗಳಿಗೆ ಸರ್ಕಾರಿ ಹುದ್ದೆಗಳ ಕನಸು ಇದ್ದರೂ ಆರ್ಥಿಕ ಪರಿಸ್ಥಿತಿಯ ಕಾರಣದಿಂದ ತಮ್ಮ ವಿದ್ಯಾಭ್ಯಾಸದ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದುಡಿಯುವ ಅನಿವಾರ್ಯತೆಯು ಅವರ ಪ್ರತಿಭೆಯನ್ನು ಕಟ್ಟಿಹಾಕುತ್ತದೆ ಅಲ್ಲದೇ ವಿದ್ಯಾಭ್ಯಾಸ ಮಾಡುತ್ತಿರುವ ಸಂದರ್ಭದಲ್ಲಿ ಕೇವಲ ಅಂಕಗಳ ಬಗ್ಗೆಯಷ್ಟೇ ವಿದ್ಯಾರ್ಥಿಗಳು ಮತ್ತು ಪೋಷಕರು ಗಮನ ಹರಿಸುವುದರಿಂದ ಉದ್ಯೋಗ ಕೌಶಲ್ಯತೆಯ ಕೊರತೆಯು ಅವರಿಗೆ ಉತ್ತಮ ಉದ್ಯೋಗವನ್ನು ಗಿಟ್ಟಿಸಿಕೊಳ್ಳಲು ತೊಡಕಾಗಿ ಪರಿಣಮಿಸುತ್ತದೆ. ಇದೆಲ್ಲವನ್ನೂ ಮನಗಂಡು ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಉದ್ಯೋಗ ಕೌಶಲ್ಯತೆಯನ್ನು ರೂಡಿಸಿಕೊಳ್ಳುವ ಮೂಲಕ ಉತ್ತಮ ಉದ್ಯೋಗ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳಬೇಕು ಎಂಬ ದೂರದೃಷ್ಟಿಯನ್ನು ಇಟ್ಟುಕೊಂಡು ವಿದ್ಯಾ ಮಾತಾ ಅಕಾಡೆಮಿಯು ಇನ್ಸ್ಟಿಟ್ಯೂಟ್ ಆಫ್ ಪ್ರಾಕ್ಟಿಕಲ್ ಅಕೌಂಟಿಂಗ್ ಮತ್ತು ಟ್ಯಾಕ್ಸೆಶನ್ ವಿಭಾಗವನ್ನು ಪ್ರಾರಂಭಿಸಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ, ಉದ್ಯೋಗ ಕೌಶಲ್ಯ ತರಬೇತಿಗಳು, ಸ್ಪೋಕನ್ ಇಂಗ್ಲೀಷ್, ಕೌಶಲ್ಯ ಆಧಾರಿತ ಕಂಪ್ಯೂಟರ್ ತರಬೇತಿ, ದೈಹಿಕ ಕ್ಷಮತೆಯ ಮೈದಾನ ತರಬೇತಿ ಎಲ್ಲಾವನ್ನೂ ಒಂದೇ ಸೂರಿನಡಿ ವಿದ್ಯಾರ್ಥಿಗಳಿಗೆ ನೀಡುವುದರ ಮೂಲಕ ಅವರು ಸರ್ಕಾರಿ ಇಲ್ಲವೇ ಖಾಸಗಿ ಉದ್ಯೋಗವನ್ನು ಪಡೆಯುವಂತೆ ಆಗಿರಬೇಕು. ಈ ಮೂಲಕ ” ಉದ್ಯೋಗ ಭದ್ರತೆ” ಯನ್ನು ಒದಗಿಸಬೇಕು ಎನ್ನುವ ಚಿಂತನೆಯೊಂದಿಗೆ ವಿದ್ಯಾಮಾತಾ ಅಕಾಡೆಮಿಯು ವಿದ್ಯಾರ್ಥಿಗಳನ್ನು ತರಬೇತಿಗೊಳಿಸುತ್ತಿದೆ.
ಹಲವಾರು ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳಲು ಮತ್ತು ಉದ್ಯೋಗ ಮೇಳಗಳು/ ನೇರ ಸಂದರ್ಶನಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸಿ ಕೊಟ್ಟಿರುವ ವಿದ್ಯಾ ಮಾತಾ ಅಕಾಡೆಮಿಯು ಪ್ರಾರಂಭಿಸಿರುವ ಪ್ರಾಕ್ಟಿಕಲ್ ಅಕೌಂಟ್ಸ್ , ಟ್ಯಾಕ್ಸ್ , ಹೆಚ್.ಆರ್ ತರಬೇತಿಯು ವಾರದ ಏಳು ದಿನವೂ ಲಭ್ಯವಿದ್ದು ಬೆಳಿಗ್ಗೆ 8:00ರಿಂದ ಸಂಜೆ 5:30ವರೆಗೆ ವಿವಿಧ ಬ್ಯಾಚ್ ಗಳಲ್ಲಿ (ಪ್ರತಿನಿತ್ಯ ಒಂದು ಅಥವಾ ಎರಡು ಗಂಟೆ) ಅಲ್ಲದೇ ವಾರಾಂತ್ಯ ತರಗತಿಗಳು ಲಭ್ಯವಿದೆ ಹಾಗೂ ಆನ್ ಲೈನ್ ತರಗತಿಗಳು ಕೂಡ ಲಭ್ಯವಿದೆ.
ಹೆಚ್ಚಿನ ಮಾಹಿತಿಗಾಗಿ, ವಿದ್ಯಾಮಾತಾ ಅಕಾಡೆಮಿ, ಹಿಂದೂಸ್ತಾನ್ ಕಾಂಪ್ಲೆಕ್ಸ್ , ಎ. ಪಿ. ಎಂ. ಸಿ. ರೋಡ್, ಸಿ.ಟಿ. ಆಸ್ಪತ್ರೆ ಹತ್ತಿರ , ಪುತ್ತೂರು. ದ.ಕ. 574201
ಫೋನ್ ನಂ: 9620468869/8590773486



























