ಮಂಗಳೂರು: ಮೂಲದ ವಿವಾಹಿತ ಯುವಕನೊಬ್ಬ ತನ್ನ ಪ್ರೇಯಸಿಯೊಂದಿಗೆ ಸುಳ್ಯದ ಗಾಂಧಿನಗರದ ಲಾಡ್ಜ್ ಒಂದರಲ್ಲಿ ಬಂದು ತಂಗಿದ್ದು, ಮಾಹಿತಿ ಪಡೆದ ಆತನ ಪತ್ನಿ ಸುಳ್ಯಕ್ಕೆ ಬಂದು ಅವರು ತಂಗಿದ್ದ ಖಾಸಗಿ ಲಾಡ್ಜ್ ಬಳಿ ಆಗಮಿಸಿ ಗದ್ದಲ ಸೃಷ್ಟಿಸಿದ ಘಟನೆ ನಡೆದಿದೆ.
ಖಾಸಗಿ ಲಾಡ್ಜ್ ನಲ್ಲಿದ್ದ ತನ್ನ ಪ್ರೇಯಸಿಯ ಜೊತೆಗಿದ್ದ ವಿವಾಹಿತ ಯುವಕ ತನ್ನ ಪತ್ನಿ ಲಾಡ್ಜ್ನ ರಿಸೆಪ್ಶನ್ ಬಳಿಗೆ ಬಂದು ನಿಂತಿರುವ ವಿಷಯ ತಿಳಿದು ಪ್ರೇಯಸಿಯೊಂದಿಗೆ ಲಾಡ್ಜ್ ನಿಂದ ಹೊರಗೆ ಬಂದಿದ್ದಾರೆ.

ಇವರು ಬರುವುದನ್ನು ಕಾಯುತ್ತಿದ್ದ ಆತನ ಹೆಂಡತಿ ರಸ್ತೆಯಲ್ಲಿ ಗಂಡನನ್ನು ಮತ್ತು ಆ ಯುವತಿಯನ್ನು ತೀವ್ರವಾಗಿ ತರಾಟೆಗೆತ್ತಿಕೊಳ್ಳ ತೊಡಗಿದ್ದಾಳೆ. ಬೊಬ್ಬೆ ಕೇಳಿ ನೂರಾರು ಜನ ಜಮಾಯಿಸಿದರು. ಕೋಪಗೊಂಡಿದ್ದ ಪತ್ನಿಯನ್ನು ಸಮಾಧಾನಪಡಿಸಲು ಪತಿ ಎಷ್ಟೇ ಪ್ರಯತ್ನ ಪಟ್ಟರೂ ಆತನಿಗೆ ಸಾಧ್ಯವಾಗಲಿಲ್ಲ.
ಪತಿಯನ್ನು ಮತ್ತು ಯುವತಿಯನ್ನು ರಸ್ತೆಯಲ್ಲಿ ಎಳೆದಾಡಿ, ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ ಮಹಿಳೆ ಯುವತಿಯನ್ನು ಹಿಡಿದು ನಿಲ್ಲಿಸಿ ತನ್ನ ಕೋಪವನ್ನು ಹೊರ ಹಾಕುತ್ತಿದ್ದರು.
ಪೊಲೀಸರಿಗೆ ವಿಷಯ ತಿಳಿದು ಅವರು ಬಂದು ಮೂವರನ್ನೂ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.



























