ಪುತ್ತೂರು: ಬೈಕ್ ಗೆ ಸ್ಕೂಟರ್ ಡಿಕ್ಕಿ ಹೊಡೆದ ಘಟನೆ ಡಿ.9 ರಂದು ನೆಕ್ಕಿಲಾಡಿಯಲ್ಲಿ ನಡೆದಿದ್ದು, ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಸುಪ್ರೀತ್ ಎಂಬವರು ಡಿ.13 ರಂದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ..
ನೆಕ್ಕಿಲಾಡಿಯಲ್ಲಿ ಮಹಮ್ಮದ್ ಸಾದಿಕ್ ಎಂಬವರು ಉಪ್ಪಿನಂಗಡಿಯಿಂದ ಪೆರ್ನೆ ಕಡೆ ಚಲಾಯಿಸುತ್ತಿದ್ದ ಬೈಕ್ ನ ಹಿಂಬದಿಗೆ ಸುಪ್ರೀತ್ ಎಂಬವರು ಸಹಸವಾರ ಮಶ್ವಿತ್ ಎಂಬವರನ್ನು ಕುಳ್ಳಿರಿಸಿಕೊಂಡು ಚಲಾಯಿಸುತ್ತಿದ್ದ ಸ್ಕೂಟರ್ ಡಿಕ್ಕಿಯಾಗಿದ್ದು, ಈ ವೇಳೆ ಗಂಭೀರ ಗಾಯಗೊಂಡ ಸುಪ್ರೀತ್ ರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೇ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ..



























