ಪುತ್ತೂರು: ಬೆಳ್ಳಿಪ್ಪಾಡಿಯ ಜಮೀನೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ತಂಡವೊಂದು ಬಂದು ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಕಾಂಗ್ರೆಸ್ ಎಸ್.ಸಿ ಘಟಕದ ನಗರ ಕಾರ್ಯದರ್ಶಿ ಜಯಂತ್ ಎಂಬವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
‘ನಾನು ಮತ್ತು ಇತರ 8 ಮಂದಿ ಬೆಳ್ಳಿಪ್ಪಾಡಿ ಕನ್ನಡ್ಕದ ಶೇಖರನಗರದ ಜಮೀನಿನಲ್ಲಿ ಶ್ವೇತಾ ಎಂಬವರ ಸೂಚನೆಯಂತೆ ಕೆಲಸ ಮಾಡುತ್ತಿದ್ದ ವೇಳೆ ಸಂಜೀವ ಗೌಡ ಮತ್ತು ಸುಮಾರು 10 ಮಂದಿ ಬಂದು ಏಕಾಏಕಿ ನನಗೆ ಹಲ್ಲೆ ನಡೆಸಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.
ಪುತ್ತೂರು ನಗರ ಕಾಂಗ್ರೆಸ್ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಜಯಂತ್ ರವರ ಆರೋಗ್ಯ ವಿಚಾರಿಸಿದ್ದಾರೆ.

