ಕಡಬ: ತಾಲೂಕಿನ ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿ ಒಂಟಿ ಕಾಡಾನೆಯೊಂದು ಬಂದು ಜನರಲ್ಲಿ ಭೀತಿ ಮೂಡಿಸಿದ ಘಟನೆ ನಡೆದಿದೆ.
ಅಡ್ಡಹೊಳೆಯ ಪೆಟ್ರೋಲ್ ಪಂಪಿನ ಬಳಿ ಕಾಡಿನಿಂದ ಹೆದ್ದಾರಿಗೆ ಬಂದ ಗಂಡಾನೆ ಹೆದ್ದಾರಿಯನ್ನು ದಾಟಲೆತ್ನಿಸಿದಾಗ ಹೆದ್ದಾರಿ ಅಗಲೀಕರಣ ಕಾರಣಕ್ಕೆ ಅಗೆಯಲ್ಪಟ್ಟ ಮಣ್ಣಿನಲ್ಲಿ ಹೂತು ಹೋಗಿ ಸಂಕಷ್ಟಕ್ಕೀಡಾಯಿತು. ಬಳಿಕ ಮೇಲೆದ್ದು ಸಾಗಿದ ಆನೆಯು ಅಯ್ಯಪ್ಪ ದೇವಾಲಯದ ಬಳಿಯಿಂದ ಪೇರಮಜಲು ರಸ್ತೆಯಲ್ಲಿ ಜನವಸತಿ ಪ್ರದೇಶದಿಂದ ಸಾಗಿ ಕಾಡು ಸೇರಿಕೊಂಡಿದೆ.
ರಾತ್ರಿ ವೇಳೆ ಈ ಪ್ರದೇಶದಲ್ಲಿ ಗೋಚರಿಸುವ ಕಾಡಾನೆಗಳು ಹಾಡಹಗಲೇ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕರು ಭಯಭೀತರಾದರು. ಆದರೇ ಕಾಣಿಸಿಕೊಂಡ ಆನೆಯು ಜನರಿಗಾಗಲಿ ಕೃಷಿ ಬೆಳೆಗಾಗಲಿ ಯಾವುದೇ ಹಾನಿ ಮಾಡದೇ ಕಾಡು ಸೇರಿಕೊಂಡಿತು…