ಬೆಳ್ತಂಗಡಿ: ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ 73ರ ರಸ್ತೆಯ ಮುಂಡಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬಡ್ತ್ಯಾರು ಎಂಬಲ್ಲಿ ಚಲಿಸುತ್ತಿದ್ದ ಲಾರಿಯ ಟ್ರಾಲಿ ತುಂಡಾಗಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.

ಬೆಂಗಳೂರಿನಿಂದ ಮಂಗಳೂರಿಗೆ ನಿಗದಿತ ಭಾರದ ಗ್ಲಾಸ್ ವಸ್ತುಗಳನ್ನು ಸಾಗಿಸುತ್ತಿದ್ದ ಲಾರಿ ಅಂಬಡ್ತ್ಯಾರು ಸಮೀಪಿಸುತ್ತಿದಂತೆ ಲಾರಿಯ ಹಿಂಬದಿ ಕಬ್ಬಿಣದ ಟ್ರಾಲಿ ಬಾಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ರಸ್ತೆ ಅಂಚಿನಲ್ಲಿದ್ದ ಕ್ಯಾಂಟೀನ್ ಸಮೀಪ ಹೋಗಿ ನಿಂತಿದೆ. ಕ್ಯಾಂಟೀನ್ ಅಥವಾ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಲ್ಲಿ ಅನಾಹುತವೇ ಸಂಭವಿಸುತ್ತಿತ್ತು.
ಲಾರಿಯ ಟ್ರಾಲಿ ಸಂಪೂರ್ಣ ಭಾಗಿ ಹೋಗಿದ್ದು, ಸ್ಥಳೀಯರು ಮರದ ಕಂಬಗಳನ್ನು ಆಧಾರವಾಗಿ ಇರಿಸಿದ್ದಾರೆ. ಲಾರಿ ಖರೀದಿಸಿ ಕೆಲವೇ ತಿಂಗಳುಗಳಾಗಿದ್ದು, ಘಟನೆಯಿಂದ ಚಾಲಕ ಸ್ಥೈರ್ಯ ಕಳೆದುಕೊಂಡಿದ್ದರಿಂದ ಸ್ಥಳೀಯರು ಉಪಚರಿಸಿದ್ದಾರೆ ಎಂದು ತಿಳಿದು ಬಂದಿದೆ..