ರಾಯಚೂರು: ಜಿಲ್ಲೆಯ ಲಿಂಗಸುಗೂರಿನ ಹೂನೂರು ಗ್ರಾಮದಲ್ಲಿ ತಿಂಡಿ ಪ್ಯಾಕೆಟ್‍ಗಳಲ್ಲಿ 500 ರೂ. ಮುಖಬೆಲೆಯ ನೋಟುಗಳು ಪತ್ತೆಯಾಗಿವೆ.
ಗ್ರಾಮದ ಕಿರಾಣಿ ಅಂಗಡಿಗಳಲ್ಲಿ ಗ್ರಾಹಕರು ಖರೀದಿಸಿದ ತಿಂಡಿ ಪ್ಯಾಕೆಟ್‍ಗಳಲ್ಲಿ ನೋಟು ಪತ್ತೆಯಾಗಿವೆ. ನೋಟು ಪತ್ತೆಯಾಗುತ್ತಿದ್ದಂತೆ ಒಂದೇ ದಿನದಲ್ಲಿ ಎಲ್ಲಾ ಪ್ಯಾಕೆಟ್‍ಗಳನ್ನು ಗ್ರಾಮಸ್ಥರು ಖಾಲಿ ಮಾಡಿದ್ದಾರೆ.

5 ರೂ, 10 ರೂ. ಬೆಲೆಯ ವಿವಿಧ ಕಂಪನಿಗಳ ಪ್ಯಾಕೆಟ್‍ಗಳಲ್ಲಿ 500 ರೂ. ನೋಟು ಪತ್ತೆಯಾಗಿರುವುದು ಒಂದೆಡೆ ಅಚ್ಚರಿಯಾದ್ರೆ ಇನ್ನೊಂದೆಡೆ ಅನುಮಾನಗಳು ಹುಟ್ಟಿಕೊಂಡಿವೆ. ಪಂಚಾಬಿ ತಡ್ಕಾ, ಹೈದ್ರಾಬಾದಿ ಕಾರ್ನ್ ಪಫ್ ಅಂತೆಲ್ಲಾ ಮುದ್ರಿಸಿರುವ ವಿವಿಧ ಮುರುಕಲು ತಿಂಡಿಗಳ ಪ್ಯಾಕೆಟ್‍ಗಳಲ್ಲಿ ಹಣ ಬಂದಿದೆ. ಒಂದೇ ಗ್ರಾಮದಲ್ಲಿ ಸುಮಾರು 20 ಸಾವಿರ ರೂಪಾಯಿವರೆಗೆ ಪ್ಯಾಕೆಟ್‍ಗಳಲ್ಲಿ ಹಣ ಸಿಕ್ಕಿದೆ.
ನೋಟುಗಳು ಅಸಲಿನಾ, ನಕಲಿನಾ ಅಂತ ಪರೀಕ್ಷೆ ಮಾಡಿ ಅಸಲಿ ಎಂದು ಗೊತ್ತಾದ ಬಳಿಕ ಗ್ರಾಮದ ಜನ ಖುಷಿಯಾಗಿದ್ದಾರೆ. ವಿವಿಧ ಆಹಾರ ಪದಾರ್ಥಗಳ ಪ್ಯಾಕೆಟ್‍ಗಳನ್ನು ವಿಜಯಪುರ ಜಿಲ್ಲೆಯಲ್ಲಿ ಉತ್ಪಾದನೆ ಮಾಡಲಾಗಿದೆ. ಕಂಪನಿ ಉತ್ಪನ್ನಗಳ ಪ್ರಚಾರಕ್ಕೆ ಬಳಸಿರಬಹುದು ಅನ್ನೋ ಶಂಕೆ ವ್ಯಕ್ತವಾಗಿದೆ. ಚುನಾವಣೆಯಲ್ಲಿ ಹಣ ಹಂಚಿಕೆ ಮಾಡಲು ಈ ರೀತಿಯಾದ ಮಾರ್ಗವನ್ನು ಹುಡುಕಿ ಪ್ಯಾಕೆಟ್ ತಯಾರಿಸಿರಬಹುದಾ ಅಂತಲೂ ಗ್ರಾಮಸ್ಥರು ಅನುಮಾನಗೊಂಡಿದ್ದಾರೆ.


























