ಬೆಂಗಳೂರಿನಲ್ಲಿ ಪುಡಿ ರೌಡಿಗಳ ಅಟ್ಟಹಾಸ ಹೆಚ್ಚಾಗುತ್ತಲೇ ಇದ್ದು, ಇದೀಗ ಹಪ್ತಾ ನೀಡಿಲ್ಲ ಎಂದು ರೌಡಿಯೊಬ್ಬ ಮೀನಿನ ಅಂಗಡಿ ಸಿಬ್ಬಂದಿ ಮೇಲೆ ಲಾಂಗ್ ಬೀಸಿದ ಘಟನೆ ಬೆಂಗಳೂರಿನ ಬಾಣಸವಾಡಿಯ ಜೈ ಭಾರತ್ ನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ.

ರೌಡಿ ಸುದೇಶ್ ಎಂಬಾತ ನಿನ್ನೆ ರಾತ್ರಿ ಬಾಣಸವಾಡಿಯ ಜೈ ಭಾರತ್ ನಗರದಲ್ಲಿರುವ ಮೀನಿನ ಅಂಗಡಿ ಬಳಿ ಬಂದು ಹಫ್ತಾ ಕೇಳಿದ್ದಾನೆ. ಈ ವೇಳೆ ಮೀನಿನ ಅಂಗಡಿ ಸಿಬ್ಬಂದಿ ಹಪ್ತಾ ಕೊಡಲು ನಿರಾಕರಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸುದೇಶ್ ಲಾಂಗ್ ಬೀಸಿ ಪುಂಡಾಟ ಮೆರೆದಿದ್ದಾನೆ.
ಘಟನೆಯ ಬಳಿಕ ಬಾಣಸವಾಡಿ ಪೊಲೀಸರು ಆರೋಪಿ ಫ್ರೇಜರ್ ಟೌನ್ ನಿವಾಸಿ ಸುದೇಶ್ ನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ..