ಪುತ್ತೂರು: ದರ್ಬೆಯ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಚಿಣ್ಣರ ಆಯನ-2022’ ಕಾರ್ಯಕ್ರಮ ಡಿ.20 ಮತ್ತು 21 ರಂದು ನಡೆಯಲಿದೆ.

ಈ ಕಾರ್ಯಕ್ರಮವು ಲಿಟ್ಲ್ ಫ್ಲವರ್ ಶಾಲೆಯಲ್ಲಿ ನಡೆಯುತ್ತಿರುವ 94ನೇ ವರ್ಷದ ಮಕ್ಕಳ ಹಬ್ಬವಾಗಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮಕ್ಕಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ..