ಪುತ್ತೂರು: ಕೊಂಬೆಟ್ಟು ಅಟಲ್ ಉದ್ಯಾನದಲ್ಲಿ ಅಳವಡಿಸಲಾಗಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಹಾನಿ ಮಾಡಿದ ಘಟನೆ ನಡೆದಿದೆ.
‘ಅಜಾತಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ’ ಹೆಸರಿನಲ್ಲಿ ಅಟಲ್ ಉದ್ಯಾನಕ್ಕೆ ನಾಮಕರಣ ಮಾಡಿ ಅವರ ಭಾವಚಿತ್ರವೊಂದನ್ನು ಅಳವಡಿಸಲಾಗಿತ್ತು.
ಡಿ.20 ರಂದು ಹಗಲು ಯಾರೋ ಕಿಡಿಗೇಡಿಗಳು ವಾಜಪೇಯಿ ಭಾವಚಿತ್ರಕ್ಕೆ ಹಾನಿ ಮಾಡಿದ್ದು, ಕಿಡಿಗೇಡಿಗಳು ಹಾನಿ ಮಾಡಿದ ಚಿತ್ರಣ ಸ್ಥಳೀಯ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ತಿಳಿದು ಬಂದಿದೆ..

























