ಬೆಳಗಾವಿ: ಎಂಟು ಬಾರಿ ವಿಧಾನಪರಿಷತ್ ಸದಸ್ಯರಾಗಿರುವ ಬಸವರಾಜ ಹೊರಟ್ಟಿ ಅವರು ಪರಿಷತ್ತಿನ ಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜನತಾ ಪರಿವಾರದಿಂದ ಏಳು ಬಾರಿ ಗೆದ್ದಿರುವ ಅವರು ಅಕ್ಟೋಬರ್ 2022 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮೇಲ್ಮನೆಗೆ ಆಯ್ಕೆಯಾಗಿದ್ದಾರೆ.
43 ವರ್ಷಗಳಿಂದ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಎಂಎಲ್‌ಸಿಯಾಗಿ ಆಯ್ಕೆಯಾಗಿರುವ ಹೊರಟ್ಟಿ ಮಂಗಳವಾರ ಬೆಳಗ್ಗೆ ನಾಮಪತ್ರ ಸಲ್ಲಿಸಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ನೀರಾವರಿ ಸಚಿವ ಗೋವಿಂದ ಕಾರಜೋಳ, ಪರಿಷತ್ತಿನ ಮುಖ್ಯ ಸಚೇತಕ ವೈ.ಎ. ನಾರಾಯಣಸ್ವಾಮಿ, ಸದಸ್ಯ ಎಸ್.ವಿ. ಸಂಕನೂರು ಉಪಸ್ಥಿತರಿದ್ದರು.
76 ವರ್ಷ ವಯಸ್ಸಿನ ಹೊರಟ್ಟಿ ಅವರು ಜೂನ್ 22, 2018 ರಿಂದ ಡಿಸೆಂಬರ್ 12, 2018 ಮತ್ತು ಫೆಬ್ರವರಿ 16, 2021 ರಿಂದ ಮೇ 16, 2022 ರವರೆಗೆ ಎರಡು ಸಂದರ್ಭಗಳಲ್ಲಿ ಪರಿಷತ್ತಿನ ಹಂಗಾಮಿ ಅಧ್ಯಕ್ಷರಾಗಿದ್ದರು. ಹೊರಟ್ಟಿ ಮೊದಲ ಬಾರಿಗೆ 1980 ರಲ್ಲಿ ಎಂ.ಎಲ್.ಸಿ ಯಾಗಿ ಆಯ್ಕೆಯಾದವರು ದಾಖಲೆಯ 8ನೇ ಬಾರಿಗೆ ಗೆಲುವಿನ ಸರಣಿ ಮುಂದುವರಿಸಿದರು. ಅವರು ಹಲವಾರು ಸರ್ಕಾರಗಳಲ್ಲಿ ಸಚಿವರಾಗಿದ್ದರು. ಪ್ರಾಥಮಿಕ ಶಿಕ್ಷಣದ ಜೊತೆಗೆ ಎರಡು ಬಾರಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಸೇರಿದಂತೆ ವಿವಿಧ ಖಾತೆಗಳನ್ನು ನಿಭಾಯಿಸಿದ್ದಾರೆ.

























