ಬೆಳ್ತಂಗಡಿ: ಬಳ್ಳಾರಿಯಿಂದ ಶಬರಿಮಲೆಗೆ ಹೊರಟ ಮಿನಿ ಬಸ್ ಮುಂಡಾಜೆಯ ಉಳ್ಳಾಲ್ತಿ ಕಟ್ಟೆ ಎಂಬಲ್ಲಿ ಬ್ರೇಕ್ ಫೇಲ್ ಆಗಿ ಬಸ್ ರಸ್ತೆ ಬದಿಯ ಅರಣ್ಯಕ್ಕೆ ನುಗ್ಗಿದ ಪರಿಣಾಮ ಹಲವರಿಗೆ ಗಾಯವಾದ ಘಟನೆ ಡಿ.23ರ ಮುಂಜಾನೆ ನಡೆದಿದೆ.

ಕೂಡ್ಲಗಿ ತಾಲೂಕಿನ ಚಿಕ್ಕಜೋಗೆ ಹಳ್ಳಿಯ ಶಶಿ, ಜಲಧರ, ರಘು, ಬಸವರಾಜ್, ಲೋಕ ಎಂಬವರು ಗಾಯಗೊಂಡಿದ್ದು, ಇಬ್ಬರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.
ವಾಹನ ನುಗ್ಗಿದ ಸ್ಥಳದಲ್ಲಿ ಕಂದಕ ಹಾಗೂ ವಿದ್ಯುತ್ ಕಂಬವಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ.

ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಠಾಣೆ ಪೊಲೀಸರು ತೆರಳಲಿದ್ದು, ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ..

























