ಬೆಳ್ಳಾರೆ: ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಿದ್ದಾರೆಂದು ಆರೋಪಿಸಿ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಎಂಬವರ ವಿರುದ್ಧ ಹಿಂದೂ ಸಂಘಟನೆ ಪ್ರಮುಖರು ದೂರು ನೀಡಿದ್ದು, ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣಿಯೂರು ನಿವಾಸಿ, ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ರವರ ವಿರುದ್ಧ ವಿಶ್ವ ಹಿಂದೂ ಪರಿಷದ್ ಬಜರಂಗದಳ ಪ್ರಮುಖರು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಸಂಜೀವ ಪೂಜಾರಿ ರವರು 2021ರ ಡಿ.30 ರಂದು ಭಾರತ ದೇಶ ಮತ್ತು ಹಿಂದೂ ಸಂತ ಸಮಾಜದ ಬಗ್ಗೆ ಅತಿ ಕೀಳು ಮಟ್ಟಕ್ಕೆ ಬಂದಿದೆ ಎನ್ನುವ ಕಥೆ ಕಟ್ಟಿ ತನ್ನ ಫೇಸ್ ಬುಕ್ ನಲ್ಲಿ ಸಂದೇಶ ರವಾನೆ ಮಾಡಿರುವುದಲ್ಲದೆ 2022ರ ಡಿ.20 ರಂದು ಬೆಳಗ್ಗೆ ಕುಣಿತ ಭಜನೆಯಿಂದ ಮಲಗಿದ ಭಜನೆ ಎಂಬ ತಲೆ ಬರಹದಲ್ಲಿ ಸುಳ್ಳು ಮತ್ತು ಆಧಾರ ರಹಿತವಾದ ವಿಚಾರವನ್ನು, ತಪ್ಪು ಮಾಹಿತಿಯಿಂದ ಕೂಡಿದಂತಹ ಸಂದೇಶವನ್ನು ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ ರವಾನಿಸಿ ಕೀಳು ಅಭಿರುಚಿಯ ಅವಹೇಳನಕರವಾದ ಮಹಿಳೆಯ ಚಾರಿತ್ರ್ಯಕ್ಕೆ, ಗೌರವಕ್ಕೆ ಧಕ್ಕೆ ತರುವ ಪದ ಬಳಕೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ವ್ಯಾಪಕವಾಗಿ ಪ್ರಸಾರ ಮಾಡಿರುವುದಲ್ಲದೆ ಜಾತಿ ದ್ವೇಷ ಬರುವಂತೆ ಕೋಮುಗಲಭೆ ತುಂಬುವಂತೆ ಮುಸ್ಲಿಂ ಮತ್ತು ಕ್ರೈಸ್ತ ಹೆಸರನ್ನ ಉಲ್ಲೇಖಿಸಿ ಹಿಂದೂ ಸಮಾಜದ ಕೋಟ್ಯಾಂತರ ಜನರು ನಂಬಿಕೊಂಡು ಆರಾಧಿಸಿಕೊಂಡು ಬಂದಿರುವ ಆಂಜನೇಯ ದೇವರನ್ನ ಹೀಯಾಳಿಸಿ, ಸಮಾಜದ ಭಿನ್ನ ವರ್ಗಗಳ ಮಧ್ಯ ಗಲಭೆ ಹುಟ್ಟುವಂತೆ ಸಾಮಾಜಿಕ ಸಾಮರಸ್ಯ ಸ್ವಾಸ್ಥ್ಯ ಕೆಡುವ ರೀತಿಯಲ್ಲಿ ಅಲ್ಲದೆ ಒಂದು ಸಮಾಜದ ನಂಬಿಕೆ ಆಚಾರ ವಿಚಾರಗಳಿಗೆ ನೋವಾಗುವ ಅವಹೇಳನಕಾರಿ ಸಂದೇಶ ಕಳುಹಿಸಿರುವುದಲ್ಲದೆ ದೇಶದ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಯವರ ಬಗ್ಗೆ ಸಾವುಗಳನ್ನು ಉಲ್ಲೇಖಿಸಿ ಮೊಬೈಲ್ ನಲ್ಲಿ ವಾಟ್ಸಾಪ್ ಸ್ಟೇಟಸ್ ನಲ್ಲಿ ಸಂದೇಶ ರವಾನೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ 505(2),295(A) ಐಪಿಸಿರಂತೆ ಪ್ರಕರಣ ದಾಖಲಾಗಿದೆ..
























