ವಿಟ್ಲ: ವಿಟ್ಲ ಪೊಲೀಸ್ ಠಾಣೆಯ ಸಾರಡ್ಕ ಚೆಕ್ ಪೋಸ್ಟ್ ನಲ್ಲಿ ಅಕ್ರಮವಾಗಿ ಆಟೋ ರಿಕ್ಷಾ ಮೂಲಕ 30ಕೆಜಿ ಗೋಮಾಂಸ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಬದಿಯಡ್ಕ ಚೆನ್ನರಕಟ್ಟೆ ನಿವಾಸಿ ಲಿಜೋ ಜಾರ್ಜ್ (35) ಬಂಧಿತ ಆರೋಪಿ.
ಕೇಪು ಗ್ರಾಮದ ಸಾರಡ್ಕ ಚೆಕ್ ಪೋಸ್ಟ್ ಪೋಲೀಸರು ಕರ್ತವ್ಯ ನಿರ್ವಹಿಸುತ್ತಿದ್ದ ಸಮಯ ಪೆರ್ಲ ಕಡೆಯಿಂದ ಅಡ್ಯನಡ್ಕ ಕಡೆಗೆ ಆಟೋರಿಕ್ಷಾದಲ್ಲಿ ದಾಖಲಾತಿ ಇಲ್ಲದೆ ಅಕ್ರಮವಾಗಿ ದನದ ಮಾಂಸದ ಸಾಗಾಟ ಮಾಡುತ್ತಿದ್ದುದು ಬೆಳಕಿಗೆ ಬಂದಿದ್ದು, ರಿಕ್ಷಾದ ಹಿಂದುಗಡೆ ಪ್ಲಾಸ್ಟಿಕ್ ಕವರ್ ನಲ್ಲಿ ತಲಾ 1 ಕೆಜಿ ಯಂತೆ 30 ಕಟ್ಟುಗಳ ಸಹಿತ ರಿಕ್ಷಾವನ್ನು ವಶಕ್ಕೆ ಪಡೆದುಕೊಂಡು ವ್ಯಕ್ತಿಯನ್ನು ಬಂಧಿಸಲಾಗಿದೆ.