ಉಡುಪಿ: ವಿದ್ಯುತ್ ಶಾಕ್ ಹೊಡೆದು ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉಡುಪಿಯ ಪಡುಬಿದ್ರೆಯಲ್ಲಿ ನಡೆದಿದೆ.
ಲಿಂಗರಾಜು (19) ಮೃತಪಟ್ಟ ಯುವಕ.

ಪಡುಬಿದ್ರಿಯ ರಾಷ್ಟ್ರೀಯ ಹೆದ್ದಾರಿ 66ರ ಬಳಿಯ ಪೆಟ್ರೋಲ್ ಬಂಕ್ನ ಅರ್ಥಿಂಗ್ ಕಾಮಗಾರಿ ನಡೆಸುತ್ತಿದ್ದ ವೇಳೆ ದುರಂತ ಸಂಭವಿಸಿದೆ.
ಲಿಂಗರಾಜು ಪಿಕಾಸಿನಿಂದ ಮಣ್ಣು ಅಗೆಯುತ್ತಿದ್ದ ವೇಳೆ ಶಾಕ್ ತಗುಲಿದೆ.
ಗುತ್ತಿಗೆ ಕಾಮಗಾರಿಗಾಗಿ ಲಿಂಗರಾಜು, ಮಂಗಳಪ್ಪ, ಎಲ್ಲಪ್ಪ ಹಾಗೂ ಕಿರಣ್ ಎನ್ನುವವರು ಬಂದಿದ್ದರು. ಈ ವೇಳೆ ಲಿಂಗರಾಜುಗೆ ಶಾಕ್ ತಗುಲಿ ಮೃತಪಟ್ಟರೆ, ಮಂಗಳಪ್ಪನವರಿಗೂ ಶಾಕ್ ತಗುಲಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

























