ಅಕ್ರಮ ಕಸಾಯಿಖಾನೆಗೆ ಬೆಳ್ಳಂಬೆಳಗ್ಗೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿದ ಘಟನೆ ಮೂಡಬಿದರೆಯಲ್ಲಿ ನಡೆದಿದೆ.

ಮೂಡಬಿದಿರೆಯ ಅಲಂಗಾರು ಆಶ್ರಯ ಕಾಲೋನಿಯಲ್ಲಿರುವ ಗಿಲ್ಬರ್ಟ್ ಮಿರಾಂದ ಎಂಬವರ ಅಕ್ರಮ ಕಸಾಯಿಖಾನೆ ಗೆ ಖಚಿತ ಮಾಹಿತಿ ಮೇರೆಗೆ ಹಿಂಜಾವೇ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.

ದಾಳಿ ವೇಳೆ 4 ಗೋವು ಮತ್ತು ಭಾರಿ ಪ್ರಮಾಣದಲ್ಲಿ ಮಾಂಸ ಕಂಡು ಬಂದಿದ್ದು, ಈ ಬಗ್ಗೆ ಮೂಡಬಿದ್ರೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ..
























