ಬಂಟ್ವಾಳ: ನಗರ ಠಾಣಾ ವ್ಯಾಪ್ತಿಯಲ್ಲಿ ಸರಣಿ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕಡಬದ ಗೋಳಿತೊಟ್ಟು ನಿವಾಸಿ ಮೊಹಮ್ಮದ್ ಇರ್ಫಾನ್(24) ಎಂದು ಗುರುತಿಸಲಾಗಿದೆ.

ಆ.7 ರಂದು ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಗಾಣದಪಡ್ಪು ಎಂಬಲ್ಲಿರುವ ಗುರುಕೃಪಾ ಕಾಂಪ್ಲೆಕ್ಸ್ ಕಟ್ಟಡದಲ್ಲಿರುವ ರಾಜರಾಮ್ ಎಂಬವರಿಗೆ ಸೇರಿದ ‘ವಾಹಿನಿ’ ಹೆಸರಿನ ಹೋಲ್ ಸೇಲ್ ಅಂಗಡಿಯ ಶಟರಿನ ಬಾಗಿಲ ಬೀಗವನ್ನು ಮರಿದು ಒಳ ಪ್ರವೇಶಿಸಿ ಅಂಗಡಿಯೊಳಗಿದ್ದ 20,000/- ರೂಪಾಯಿ ಮೌಲ್ಯದ 2 ಮೊಬೈಲ್ ಪೋನ್ ಗಳನ್ನು ಹಾಗೂ ನಗದು 10,000/- ಹಣವನ್ನು ಕಳವು ಮಾಡಿದ್ದ.
ಆರೋಪಿಯು 2021ನೇ ನವೆಂಬರ್ ತಿಂಗಳಲ್ಲಿ ಬಿ ಮೂಡ ಗ್ರಾಮದ ಬಿ.ಸಿ.ರೋಡ್ ಶ್ರೀನಿವಾಸ ಕಾಂಪ್ಲೆಕ್ಸ್ ಕಟ್ಟಡದಲ್ಲಿರುವ ವಕೀಲರಾದ ಸುದರ್ಶನ್ ರವರ ಕಛೇರಿಯಲ್ಲಿದ್ದ ರೂಪಾಯಿ 3,000/- ಕಳವು ಮಾಡಿದ್ದು, 2022ನೇ ಡಿಸೆಂಬರ್ 6 ರಂದು ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಗೋಳಿತೊಟ್ಟು ಎಂಬಲ್ಲಿರುವ ಮನೆಯ ಬಾಗಿಲನ್ನು ಬೀಗವನ್ನು ಮುರಿದು ನಗದು ಕಳವು ಮಾಡಿದ್ದ.
ಕಾರ್ಯಚರಣೆಯಲ್ಲಿ ಬಂಟ್ವಾಳ ನಗರ ಠಾಣಾ ವಿವೇಕಾನಂದ ರವರ ನೇತೃತ್ವದ ತಂಡದಲ್ಲಿ ಪಿಎಸ್ಐ ಅವಿನಾಶ್, ಕಲೈಮಾರ್ ಸಿಬ್ಬಂದಿಯವರಾದ ರಾಜೇಶ್, ಇರ್ಷಾದ್, ಗಣೇಶ್ ಹಾಗೂ ಪ್ರವೀಣ್ ರವರು ಭಾಗವಹಿಸಿದ್ದರು.























