ಪುತ್ತೂರು: ಅರುಣಾ ಚಿತ್ರಮಂದಿರದ ಬಳಿ ಕೆಲ ವರ್ಷಗಳ ಹಿಂದೆ ಇದ್ದ ಪೊಪ್ಯುಲರ್ ಕಬ್ಬಿನ ಹಾಲಿನ ಅಂಗಡಿ ಮಾಲಕ
ಗಣೇಶ್ ಶೆಣೈ (47) ರವರು ಡಿ.25 ರಂದು ಮುಂಜಾನೆ
ಹೃದಯಾಘಾತದಿಂದ ನಿಧನರಾಗಿದ್ದಾರೆ.

ನೆಲ್ಲಿಕಟ್ಟೆ ನಿವಾಸಿಯಾಗಿರುವ ಗಣೇಶ್ ಶೆಣೈ ರವರು
ಅವಿವಾಹಿತರಾಗಿದ್ದು, ಅರುಣಾ ಚಿತ್ರ ಮಂದಿರದ ಬಳಿ ಪೊಪ್ಯುಲರ್ ಕಬ್ಬಿನ ಹಾಲಿನ ಅಂಗಡಿನ ನಡೆಸುತ್ತಿದ್ದು ಕ್ರಮೇಣ ಕಬ್ಬಿನ ಹಾಲಿನ ಅಂಗಡಿಯನ್ನು ಬಿಟ್ಟು ಲ್ಯಾಂಡ್ಲಿಂಕ್ ವ್ಯವಹಾರ ನಡೆಸುತ್ತಿದ್ದರು.

ಡಿ.25ರ ಮುಂಜಾನೆ ಜಾವ ಅವರಿಗೆ ಎದೆನೋವು ಕಾಣಿಸಿಕೊಂಡು ನಿಧನರಾಗಿದ್ದಾರೆ.
ಗಣೇಶ್ ಶೆಣೈ ಅವರ ತಾಯಿ ಮತ್ತು ಸಹೋದರಿಯರು ಮಂಗಳೂರಿಗೆ ತೆರಳಿದ್ದು, ನಿನ್ನೆ ರಾತ್ರಿ ಗಣೇಶ ಒಬ್ಬರೇ ಮನೆಯಲಿದ್ದರು. ಬೆಳಿಗ್ಗೆ ಪೋನ್ ಕರೆಯನ್ನು ಸ್ವೀಕರಿಸದ
ಹಿನ್ನೆಲೆಯಲ್ಲಿ ಬಂದು ನೋಡಿದಾಗ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಮೃತರು ತಾಯಿ, ಮೂವರು ಸಹೋದರಿಯರನ್ನು ಅಗಲಿದ್ದಾರೆ.
























