ಮಂಗಳೂರು: ಸಾಮಾಜಿಕ, ಧಾರ್ಮಿಕ ಮುಂದಾಳು, ರೈ ಎಸ್ಟೇಟ್ ಮಾಲಕ ಅಶೋಕ್ ರೈ ಕೋಡಿಂಬಾಡಿ ರವರಿಗೆ ಕಾಂಗ್ರೆಸ್ ಹೈಕಮಾಂಡ್ ನಿಂದ ಬುಲಾವ್ ಬಂದಿದೆ ಎಂದು ತಿಳಿದು ಬಂದಿದೆ.
ಡಿ.26 ರಂದು ಅಶೋಕ್ ಕುಮಾರ್ ರೈ ರವರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ದು, ಹೈಕಮಾಂಡ್ ಮಟ್ಟದ ವೀಕ್ಷಕರ ಜೊತೆ ಮಾತುಕತೆ ನಡೆಸಿದ್ದಾರೆಂದು ತಿಳಿದು ಬಂದಿದೆ.
‘ಕಾಂಗ್ರೆಸ್ ಪಕ್ಷದಿಂದ ಅವಕಾಶ ಕೊಟ್ಟರೆ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಈ ಬಾರಿ ಚುನಾವಣೆಗೆ ನಿಲ್ಲುವುದಾಗಿ’ ಅಶೋಕ್ ರೈ ರವರು ಈ ವೇಳೆ ತಿಳಿಸಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ.
ಅಶೋಕ್ ಕುಮಾರ್ ರೈ ರವರು ಸಾವಿರಾರು ಬಡಕುಟುಂಬಗಳಿಗೆ ಸಹಕಾರ ನೀಡಿದ್ದು, ದಿನಂಪ್ರತಿ ಅವರ ಕಚೇರಿಗೆ ಬಳಿ ನೂರಾರು ಮಂದಿ ಸಹಾಯಕ್ಕಾಗಿ ಬರುತ್ತಾರೆ. ಇತ್ತೀಚಿಗೆ ನಡೆದ ದಶಸಂಭ್ರಮ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿಗೆ ವಸ್ತ್ರದಾನ ಕೂಡ ಮಾಡಿದ್ದರು..
























