ಕೇಂದ್ರ ಸರ್ಕಾರದಿಂದ ಕೊಡಲ್ಪಡುವ 2022ನೇ ಸಾಲಿನ ‘ಅಟಲ್ ಸಾಧನಾ ಪುರಸ್ಕಾರ’ಕ್ಕೆ ಪುತ್ತೂರಿನ ನರಿಮೊಗರಿನಲ್ಲಿರುವ ಎಸ್.ಜಿ ಕಾರ್ಪೊರೇಟ್ಸ್ ಸಮೂಹದ ಮೆಗಾ ಪ್ರೊಸೆಸಿಂಗ್ ನ ಬಿಂದು ಸಮೂಹ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ.

‘ಬಿಂದು’ ಸಮೂಹ ಸಂಸ್ಥೆ ಆಡಳಿತ ನಿರ್ದೇಶಕರಾದ ಸತ್ಯಶಂಕರ್ ಭಟ್ ಹಾಗೂ ರಂಜಿತಾ ಶಂಕರ್ ರವರು ನವದೆಹಲಿ ವಿಜ್ಞಾನ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಕೇಂದ್ರದ ಮಾಜಿ ಸಚಿವರು, ಬಿಜೆಪಿಯ ಅಧಿಕೃತ ವಕ್ತಾರರಾಗಿರುವ ಶಾನವಾಜ್ ಹುಸೇನ್ ಹಾಗೂ ಕೇಂದ್ರ ಉಕ್ಕು ಮತ್ತು ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವ ಫಗ್ಗನ್ ಕುಲಸ್ತೆ ಪ್ರಶಸ್ತಿ ಪ್ರದಾನ ಮಾಡಿದರು.
ಆಹಾರಉತ್ಪನ್ನ ತಯಾರಿಕ ಘಟಕ ವಿಭಾಗದಲ್ಲಿ ಗ್ರಾಮೀಣ ಭಾಗದಲ್ಲಿ ಉದ್ಯೋಗವಕಾಶ ಮತ್ತು ಗ್ರಾಮೀಣ ಭಾಗದ ಆರ್ಥಿಕ ಸಂಚಲನಕ್ಕಾಗಿ ಕೇಂದ್ರ ಸರಕಾರದ ಗ್ರಾಮೀಣ ಅಭಿವೃದ್ಧಿ ಸಚಿವಾಲಯ, ಆಹಾರ ನಿರ್ವಹಣಾ ಕೈಗಾರಿಕಾ ಸಚಿವಾಲಯ ಈ ಪುರಸ್ಕಾರವನ್ನು ನೀಡಿದೆ.
ಪುತ್ತೂರಿನ ನರಿಮೊಗರಿನಲ್ಲಿ ಕಾರ್ಯಚರಿಸುತ್ತಿರುವ ಎಸ್.ಜಿ. ಸಮೂಹ ಸಂಸ್ಥೆ ಗ್ರಾಮೀಣ ಮಟ್ಟದಲ್ಲಿ ಪ್ರಾರಂಭಗೊಂಡು ಇಂದು 750 ಕೋಟಿ ರೂ. ವಾರ್ಷಿಕ ವ್ಯವಹಾರವನ್ನು ಗಳಿಸುತ್ತಿದೆ. 2025ರ ವೇಳೆಗೆ ಸಾವಿರ ಕೋಟಿ ರೂ. ವ್ಯವಹಾರದ ಗುರಿಯನ್ನು ಹಾಕಿಕೊಂಡಿದೆ..























