ಬೆಳಗಾವಿ : ಚಳಿಗಾಲದ ಅಧಿವೇಶನ ಬೆಳಗಾವಿ ನಡೆಯುತ್ತಿದ್ದು, ಈ ಅಧಿವೇಶನದಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ರವರು ಅಡಿಕೆ ಬೆಳೆಗೆ ಪ್ರೋತ್ಸಾಹ ಕೊಡಬಾರದು, ಈ ಬೆಳೆಗೆ ಭವಿಷ್ಯವೇ ಇಲ್ಲ ಎಂದು ಹೇಳಿಕೆ ಮಂಡಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಜೆಡಿಎಸ್ ಮುಖಂಡ ರೇವಣ್ಣ, ‘ನಾವು ಅಡಿಕೆ ಬೆಳೆಗಾರರೆ, ನಮ್ಮಲ್ಲೂ 50 ಎಕ್ರೆಯಲ್ಲಿ ಅಡಿಕೆ ಬೆಳೆ ಇದೆ. ಅಡಿಕೆ ಬೆಲೆಗೆ ಪ್ರೋತ್ಸಾಹ ಕೊಡಬಾರದು ಅಂದ್ರೆ ನಾವೆಲ್ಲ ಎಂದು ಮಾಡೋದು, ಅದನ್ನೇ ನಂಬಿರುವಂತಹ ಬೆಳೆಗಾರರು ಏನು ಮಾಡೋದು..!!?, ಕೃಷಿಗೆ ಮಾನ್ಯತೆ ನೀಡಿ, ಕೃಷಿಕರನ್ನು ಪ್ರೋತ್ಸಾಹಿಸಿ’ ಎಂದರು.
ಈ ವೇಳೆ ಪ್ರತಿಕ್ರಿಯಿಸಿದ ಗೃಹಸಚಿವ ಆರಗ ಜ್ಞಾನೇಂದ್ರ ರವರು, ‘ಅಡಿಕೆ ಬೆಲೆ ಎಲ್ಲಿ ಬೆಳೆಯುತ್ತಿರಲ್ಲಿವೋ ಆ ಭಾಗಕ್ಕೂ ಕೂಡ ಈಗ ವಿಸ್ತಾರವಾಗಿದೆ. ಆಂಧ್ರಪ್ರದೇಶದಲ್ಲಿ ಒಂದರಲ್ಲಿ 2 ಸಾವಿರ ಎಕ್ಟೇರ್ ನಲ್ಲಿ ಅಡಿಕೆ ಬೆಲೆ ಬರುತ್ತಿದೆ. ಆದ್ದರಿಂದ ಅಡಿಕೆಯ ಭವಿಷ್ಯ ಬಹಳ ದಿನ ಇಲ್ಲ, ಅದಕ್ಕಾಗಿ ಈ ಬೆಲೆಗೆ ಪ್ರೋತ್ಸಾಹ ನೀಡಬಾರದು.
ಕೇಂದ್ರ ಸರ್ಕಾರ ಬಯಲು ಸೀಮೆ ಕಡೆ ಡ್ರಿಪ್ರಿಗೇಷನ್ ಅನ್ನು ತೆಗೆದು ಹಾಕಿದೆ. ಮಲ್ನಾಡಿನಲ್ಲಿ ಎಲಿಗೇಷನ್ ಇಲ್ಲ, ಇಲ್ಲಿ ಡ್ರಿಪ್ರಿಗೇಷನ್ ಗೆ ಅವಕಾಶ ಮಾಡಿಕೊಟ್ಟಿದೆ. ಅಡಿಕೆ ಜಾಸ್ತಿ ಬೆಳೆಯೋದರಲ್ಲಿ ಅರ್ಥವೇ ಇಲ್ಲಾ, ಯಾಕೇಂದರೆ ಅದು ನಮ್ಮ ಭವಿಷ್ಯಕ್ಕೆ ಬಹಳ ಮಾರಕವಾಗಲಿದೆ. ರಾಜ್ಯದ ಎಲ್ಲಾ ಕಡೆ ಅಡಿಕೆ ಬೆಳೆಯಲು ಮುಂದಾಗುತ್ತಿದ್ದು, ಮುಂದೊಂದು ದಿನ ಅಡಿಕೆ ಬೆಲೆ ಮತ್ತಷ್ಟು ಕುಸಿತದಿಂದ ಅವರಿಗೆ ಮುಳುವಾಗಲಿದೆ.
ಸಾಲ ಮಾಡಿ ಡ್ಯಾಮ್ ಕಟ್ಟಿದ್ವಿ, ಎಲಿಗೇಷನ್ ಮಾಡಿದ್ವಿ, ನಿರ್ದಿಷ್ಟವಾಗಿ ಎಣ್ಣೆ ಬೆಳೆ, ಆಹಾರದ ಬೆಳೆ, ಬೆಳೆಯುವುದಕ್ಕಾಗಿ ಸಾಲ ತಂದು, ಅಡಿಕೆ ಬೆಳೆಯಲು ಅವಕಾಶ ಮಾಡಿ ಕೊಟ್ಟಿದ್ದೇವೆ. ರೈತರಿಗೆ ಈ ರೀತಿಯಾಗಿ ಹೇಳಲು ಸಾಧ್ಯವಿಲ್ಲ ಆದರೇ ಪ್ರೋತ್ಸಾಹ ನೀಡುವುದು ಅನಗತ್ಯವಾಗಿದೆ. ಇನ್ನು 5, 10 ವರ್ಷದಲ್ಲಿ ಇದು ಮಾರಕವಾಗಲಿದೆ. ವರ್ಷದಲ್ಲಿ ಒಂದು ಕೋಟಿ ಅಡಿಕೆ ಗಿಡಗಳು ನರ್ಸರಿಯಿಂದ ಖಾಲಿಯಾಗುತ್ತಿವೆ. ಈ ಮಟ್ಟದಲ್ಲಿ ಹೋದ್ರೆ ಖಂಡಿತಾ ಅಡಿಕೆಗೆ ಭವಿಷ್ಯವಿಲ್ಲ. ನಾವು ಸಂಪ್ರದಾಯಕ ಅಡಿಕೆ ಬೆಳೆಗಾರರು, ಆದ್ರೇ ಇನ್ನು ಅಡಿಕೆಗೆ ಹೆಚ್ಚು ವರ್ಷ ಬಾಳ್ವೆ ಇಲ್ಲ.. ಬೇರೆ ಬೆಳೆಗಳಿಗೆ ಪ್ರೋತ್ಸಾಹಿಸೋಣ’ ಎಂದರು..
ಸದ್ಯ ಈ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದ್ದು, ಅಡಿಕೆ ಬೆಳೆಗಾರರಲ್ಲಿ ಆತಂಕ ಹೆಚ್ಚಿದೆ. ಹಲವರು ಈ ಬಗ್ಗೆ ಆಕ್ರೋಶ ವ್ಯಕ್ತ ಪಡಿಸುತ್ತಿದ್ದು, ಪರ-ವಿರೋಧದ ಚರ್ಚೆಗಳು ನಡೆಯುತ್ತಿದೆ..