ಇಷ್ಟು ದಿನ ಬಸ್ನಲ್ಲಿ ರೈಲಿನಲ್ಲಿ ಪ್ರಯಾಣಿಕರು ಹೊಡೆದಾಡಿಕೊಂಡಿದ್ದನ್ನು ನೋಡ್ತಿದ್ವಿ. ಇದೀಗ ವಿಮಾನದಲ್ಲೂ ಹೊಡೆದಾಡಿಕೊಂಡ ಘಟನೆ ನಡೆದಿದೆ.
ಥೈ ಸ್ಟೈಲ್ ಏರ್ವೇಸ್ ವಿಮಾನದಲ್ಲಿ ವ್ಯಕ್ತಿಯೊಬ್ಬರಿಗೆ ಗುಂಪೊಂದು ಮನಸೋ ಇಚ್ಛೆ ಥಳಿಸಿದೆ.
ಬ್ಯಾಂಕಾಕ್ನಿಂದ ಕೋಲ್ಕತ್ತಾಗೆ ಬರುತ್ತಿದ್ದ ಥೈ ಸ್ಟೈಲ್ ಏರ್ ವೇಸ್ ವಿಮಾನದಲ್ಲಿ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಪ್ರಯಾಣಿಕನೊಬ್ಬ ಇನ್ನೊಬ್ಬ ಪ್ರಯಾಣಿಕನಿಗೆ ಕೈತೋರಿಸಿ ಮಾತನಾಡಬೇಡ, ಕೈ ಇಳಿಸಿ ಮಾತಾಡೆಂದು ಗದರಿದ್ದಾನೆ. ಈ ವೇಳೆ ವಿಮಾನದ ಮಹಿಳಾ ಸಿಬ್ಬಂದಿ ಗಲಾಟೆ ಮಾಡಬೇಡಿ ಎಂದು ಹೇಳುತ್ತಾರೆ.
ಅಷ್ಟರಲ್ಲಿ ಇಬ್ಬರು ವ್ಯಕ್ತಿಗಳು ಕೈ, ಕೈ ಮಿಲಾಯಿಸಿ ಬಿಡ್ತಾರೆ. ಕೈ ತೋರಿಸಿ ಮಾತಾಡ್ತಿದ್ದ ವ್ಯಕ್ತಿಗೆ ಪ್ರಯಾಣಿಕನ ಹಾಗೂ ಅವನ ಕಡೆಯವರು ಬಂದು ಮನಸೋ ಇಚ್ಛೆ ಥಳಿಸಿದ್ದಾರೆ. ಈ ವೇಳೆ ಸಹ ಪ್ರಯಾಣಿಕರು ಹಾಗೂ ಸಿಬ್ಬಂದಿ ಹೊಡೆಯದಂತೆ ಮನವಿ ಮಾಡಿಕೊಂಡಿದೆ. ಆ ಗುಂಪು ಮಾತ್ರ ವ್ಯಕ್ತಿಗೆ ಹಿಗ್ಗಾಮುಗ್ಗಾ ಹೊಡೆದಿದೆ.
ಸದ್ಯ ಈ ಘಟನೆಯನ್ನ ವಿಮಾನದ ಪ್ರಯಾಣಿರೊಬ್ಬರು ವೀಡಿಯೋ ಮಾಡಿ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗುತ್ತಿದೆ…
Not many smiles on this @ThaiSmileAirway flight at all !
— VT-VLO (@Vinamralongani) December 28, 2022
On a serious note, an aircraft is possibly the worst place ever to get into an altercation with someone.
Hope these nincompoops were arrested on arrival and dealt with by the authorities.#AvGeek pic.twitter.com/XCglmjtc9l