ವಿಟ್ಲ : ಸುತ್ತಮುತ್ತ ಆಡುಗಳನ್ನು ಕದಿಯುತ್ತಿದ್ದ ಇಬ್ಬರು ಕಳ್ಳರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ವಿಟ್ಲದಲ್ಲಿ ನಡೆದಿದೆ.
ಸಾಲೆತ್ತೂರು ನಿವಾಸಿಗಳಾದ ಅಜೀಮ್ (19), ಅನಸ್ (19) ಖದೀಮರು.

ಪೆರುವಾಯಿ, ಅಡ್ಯನಡ್ಕ, ಕೇಪು, ಮರಕ್ಕಿಣಿ, ಅಳಿಕೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಮೂರ್ನಾಲ್ಕು ತಿಂಗಳಿಂದ ಗುಡ್ಡಕ್ಕೆ ಮೇಯಲು ಬಿಟ್ಟ ಬೆಲೆಬಾಳುವ ಆಡುಗಳು ನಾಪತ್ತೆಯಾಗುತ್ತಿತ್ತು.
ಆಡುಗಳ ನಾಪತ್ತೆಯಿಂದಾಗಿ ಮಾಲೀಕರು ಹೈರಾಣರಾಗಿದ್ದು ಆಡುಕಳ್ಳರ ಪತ್ತೆಹಚ್ಚಲು ಕಾಯುತ್ತಿದ್ದರು. ಇಂದು ಸಂಜೆ ವೇಳೆ ಮರಕ್ಕಿಣಿಯಿಂದ ಆಡು ಕಳ್ಳತನ ಮಾಡಿ ಬರುತ್ತಿದ್ದ ಯುವಕರಿಬ್ಬರನ್ನು ಕೇಪು ಕಲ್ಲಂಗಳ ದ್ವಾರ ಸಮೀಪ ಸಾರ್ವಜನಿಕರ ತಂಡ ರೆಡ್ ಹ್ಯಾಂಡಾಗಿ ಹಿಡಿದು ಬಳಿಕ ವಿಟ್ಲ ಪೊಲೀಸರ ವಶಕ್ಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ…



























