ಪುತ್ತೂರು: ಶಾಲೆಯಿಂದ ಮನೆಗೆ ಹೋಗುತ್ತಿದ್ದ ಪುನೀತ್ ಎಂಬ ವಿದ್ಯಾರ್ಥಿಗೆ ಕಾರು ಅಪಘಾತವಾಗಿ ತಲೆಗೆ ಮತ್ತು ಕಾಲಿಗೆ ತೀವ್ರ ಗಾಯಗೊಂಡು ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಆಪರೇಷನ್ ಗಾಗಿ 5 ಲಕ್ಷದಷ್ಟು ವೆಚ್ಚವಾಗಲಿದ್ದು, ಇದನ್ನರಿತ k4 ಕುಟ್ಟಿ ವ್ಲಾಗ್ ಎಂಬ ಯೂಟ್ಯೂಬ್ ಚಾನೆಲ್ ಪುತ್ತೂರಿನ ಕೆಲವೊಂದು ಅಂಗಡಿಗಳಿಂದ ಮತ್ತು ಸಾರ್ವಜನಿಕರಿಂದ ವಿದ್ಯಾರ್ಥಿಗಾಗಿ ಧನ ಸಂಗ್ರಹ ಮಾಡಲಾಯಿತು.

ಸಂಗ್ರಹಿಸಿದ ಎಲ್ಲಾ ಮೊತ್ತಗಳನ್ನು ವಿದ್ಯಾರ್ಥಿ ಕಲಿಯುತ್ತಿರುವ ಶಾಲೆಯ ಮುಖ್ಯೋಪಾಧ್ಯಾಯರಿಗೆ ನೀಡಲಾಗುತ್ತದೆ ಎಂದು ತಂಡ ತಿಳಿಸಿದೆ..
