ಸುಪ್ರಜಿತ್ ಫೌಂಡೇಶನ್ ಬೆಂಗಳೂರು ಇದರ ಎಂ.ಡಿ ಅಜಿತ್ ಕುಮಾರ್ ರೈ ರವರು ನೀಡುತ್ತಿರುವ ವಿದ್ಯಾರ್ಥಿ ವೇತನ ಕಾರ್ಯಕ್ರಮವು ವಿಟ್ಲ ಕಾಲೇಜಿನಲ್ಲಿ ನಡೆಯಿತು.

172 ವಿದ್ಯಾರ್ಥಿಗಳಿಗೆ ಒಟ್ಟು 15 ಲಕ್ಷದ 30 ಸಾವಿರ ರೂ. ಚೆಕ್ ಮೂಲಕ ವಿತರಿಸಲಾಯಿತು.

ಕಾರ್ಯಕ್ರಮವನ್ನು ಸುಪ್ರಜಿತ್ ವಿದ್ಯಾರ್ಥಿವೇತನದ ಕಮಿಟಿಯ ಚೇರ್ಮನ್ ಸುಬ್ರಾಯ ಪೈ ಯವರು ನೆರವೇರಿಸಿದರು.


























