ಮಂಗಳೂರು: ಖೋಟಾ ನೋಟು ದ್ವಿಚಕ್ರ ವಾಹನದಲ್ಲಿ ಸಾಗಿಸಿ ಚಲಾವಣೆಗೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ಅವರಲ್ಲಿದ್ದ 500 ರೂ ಮುಖಬೆಲೆಯ 4.5 ಲಕ್ಷ ರೂ. ಖೋಟಾ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಬಿ.ಸಿ ರೋಡ್ ನಿವಾಸಿ ನಿಜಾಮುದ್ದೀನ್ ಯಾನೆ ನಿಜಾಂ (32), ಜೆಪ್ಪು ನಿವಾಸಿ ರಜೇಮ್ ಯಾನೆ ರಾಫಿ(31) ಎಂದು ಗುರುತಿಸಲಾಗಿದೆ.
ಜ.2 ರ ನಂತೂರು ಬಳಿ ವಾಹನ ತಪಾಸಣೆ ಮಾಡುತ್ತಿದ್ದ ಪೊಲೀಸರನ್ನು ಕಂಡು ಸ್ಕೂಟರ್ ನಲ್ಲಿ ಬಂದ ಇಬ್ಬರು ಸವಾರರು ಅತಿವೇಗದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಮಂಗಳೂರು ಪೂರ್ವ ಠಾಣೆಯ ಪೊಲೀಸರು ತಡೆದು ಪರಿಶೀಲಿಸಿದಾಗ ಅವರ ಬಳಿ ಖೋಟಾ ನೋಟು ಕಂಡುಬಂದಿದೆ. ಆರೋಪಿಗಳು ಬೆಂಗಳೂರಿನ ಡ್ಯಾನಿಯಲ್ ಎಂಬಾತನಿಂದ ಖೋಟಾ ನೋಟು ಪಡೆದು ನಗರದಲ್ಲಿ ಚಲಾವಣೆ ಮಾಡಲೆಂದು ಸುಲಿಗೆ ಮಾಡಿದ ಸ್ಕೂಟರ್ ನಲ್ಲಿ ಬರುವ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಆರೋಪಿ ನಿಜಾಮುದ್ದೀನ್ ವಿರುದ್ದ ಮಂಗಳೂರು ಕಾರಾಗೃಹ , ವಿಟ್ಲ, ಪಾಂಡೇಶ್ವರ, ಪುತ್ತೂರು, ಕುಶಾಲನಗರ ಠಾಣೆಯಲ್ಲಿ ಎರಡು ಕೊಲೆ , ಒಂದು ದರೋಡೆ, ಕೊಲೆ ಯತ್ನ ಸುಲಿಗೆ, ಪ್ರಕರಣ ದಾಖಲಾಗಿದೆ. ಆರೋಪಿ ರಾಫಿ ವಿರುದ್ದ ಉರ್ವಾ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.