ಪುತ್ತೂರು: ಜೇಸಿಐ ಭಾರತದ ಪ್ರತಿಷ್ಟಿತ ಘಟಕಗಳಲ್ಲೊಂದಾದ ಜೇಸಿಐ ಪುತ್ತೂರು ವಲಯ XV ಪ್ರಾಂತ್ಯ A ಇದರ ಅಧ್ಯಕ್ಷ ಜೇಸಿ ಸುಹಾಸ್ ಎ ಪಿ ಎಸ್ ಹಾಗೂ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಜ.7 ರಂದು ಪುತ್ತೂರಿನ ಬಿರುಮಲೆ ಬೆಟ್ಟದಲ್ಲಿ ನಡೆಯಲಿದೆ.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ರಾಮಕುಂಜ ಪ್ರೌಢಶಾಲೆಯ ಮುಖ್ಯೋಪಾಧ್ಯಯರಾದ ಜೇಸಿ ಸತೀಶ್ ಭಟ್ ಬಿಳಿನೆಲೆ, ವಲಯ XVರ ಅಧ್ಯಕ್ಷರಾದ ಜೇಸಿ ಪುರುಷೋತ್ತಮ್ ಶೆಟ್ಟಿ, ವಲಯ XVರ ಉಪಾಧ್ಯಕ್ಷರಾದ ಜೇಸಿ ದೇವರಾಜ್ ಕುದ್ಪಾಜೆ ರವರು ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..





























