ವಿಟ್ಲ: ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಜೇಸಿ ಪೆವಿಲಿಯನ್ ನಲ್ಲಿ ಯುನಿವರ್ಸಲ್ ನಾಲೆಜ್ ಟ್ರಸ್ಟ್ ಇವರ ವತಿಯಿಂದ ‘ಲರ್ನಿಂಗ್ ಮೇಡ್ ಈಸಿ ವಿತ್ ಪಾಸಿಟಿವ್ ಎನರ್ಜಿ’ ಎಂಬ ಒಂದು ದಿನದ ಮಾಹಿತಿ ಕಾರ್ಯಕ್ರಮವನ್ನು ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಜ.3 ರಂದು ನಡೆಸಲಾಯಿತು.

ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಬಂಟ್ವಾಳ ನೇತ್ರಾವತಿ ಸಂಗಮ ಲಿಜನ್ ಮತ್ತು ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಹಭಾಗಿತ್ವದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ವಿಠ್ಠಲ್ ಜೇಸಿ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿಯಾದ ಮೋಹನ್ ಎ ಮೈರ ಅವರು ಉದ್ಘಾಟನೆ ನೆರವೇರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ ಜೇಸಿಐ ಬಂಟ್ವಾಳ ನೇತ್ರಾವತಿ ಸಂಗಮ ಲಿಜನ್ ಅಧ್ಯಕ್ಷರಾದ ಜಯಾನಂದ ಪೆರಾಜೆ ಅವರು ಭಾಗವಹಿಸಿ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ವಿಶೇಷ ಪ್ರತಿಭೆಯನ್ನು ಸದುಪಯೋಗಪಡಿಸಲು ಇಂತಹ ತರಬೇತಿಗಳು ಪ್ರಯೋಜನಕಾರಿ ಎಂದರು.

ವೇದಿಕೆಯಲ್ಲಿ ರೋಹನ್ ಸಿರಿ, ವಿದ್ಯಾಶಂಕರ್, ಶಾಲಾ ಆಡಳಿತ ನಿರ್ದೇಶಕರಾದ ಹಸನ್ ವಿಟ್ಲ, ಶಾಲಾ ಆಡಳಿತ ಅಧಿಕಾರಿ ರಾಧಾಕೃಷ್ಣ ಎ, ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲರಾದ ಜಯರಾಮ ರೈ ಸ್ವಾಗತಿಸಿದರು. ಯುನಿವರ್ಸಲ್ ನಾಲೆಜ್ ಟ್ರಸ್ಟ್ ನ ತರಬೇತುದಾರರಾದ ಶಮ್ಮಿ ಸಿರಿ, ಸುಲತಾ ಶೆಣೈ ಹಾಗೂ ಮರಿಯಾ ಪಿಂಟೊ ಸುದೀರ್ಘ ಅವಧಿಯ ತರಬೇತಿಯನ್ನು ನಡೆಸಿಕೊಟ್ಟರು.
ಪ್ರೌಢ ಶಾಲಾ ವಿದ್ಯಾರ್ಥಿಗಳು ತರಬೇತಿಯ ಪ್ರಯೋಜನ ಪಡೆದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದ ಕಾರ್ಯಕ್ರಮವನ್ನು ಸಹಶಿಕ್ಷಕಿ ಸರಸ್ವತಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕರು ಉಪಸ್ಥಿತರಿದ್ದು ಸಹಕರಿಸಿದರು..




























