ಪುತ್ತೂರು: ಕಳೆದ ಕೆಲ ತಿಂಗಳುಗಳ ಹಿಂದೆ ಅಪಘಾತದಲ್ಲಿ ಸಾವನ್ನಪ್ಪಿದ ಹಿಂದೂ ಜಾಗರಣ ವೇದಿಕೆಯ ಸಕ್ರಿಯ ಕಾರ್ಯಕರ್ತ ದೇವಿಪ್ರಸಾದ್ ಶೆಟ್ಟಿ ಬಂಟುಕಲ್ಲು ರವರ ಕನಸಿನ ಮನೆ ನಿರ್ಮಾಣದ ನೇತೃತ್ವವನ್ನು ಹಿಂದೂ ಜಾಗರಣ ವೇದಿಕೆ ಈಶ್ವರಮಂಗಲ ತೆಗೆದುಕೊಂಡಿದ್ದು, ಇದೀಗ ಮನೆ ನಿರ್ಮಾಣಗೊಂಡಿದ್ದು, “ಶ್ರೀ ದೇವಿ ನಿಲಯ” ದ ಗೃಹಪ್ರವೇಶವು ಶ್ರೀ ಗಣಪತಿ ಹೋಮ ಹಾಗೂ ಭಾರತ್ ಮಾತಾ ಪೂಜನ ಕಾರ್ಯಕ್ರಮದೊಂದಿಗೆ ಜ.28 ರಂದು ನಡೆಯಲಿದೆ.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಂದೂ ಜಾಗರಣ ವೇದಿಕೆ ಈಶ್ವರಮಂಗಲದ ಗೌರವಾಧ್ಯಕ್ಷರಾದ ಶ್ರೀಕೃಷ್ಣ ಭಟ್ ಮುಂಡ್ಯ ರವರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಪ್ರಶಿಕ್ಷಣ ಪ್ರಮುಖರಾದ ರಾಧಾಕೃಷ್ಣ ಅಡ್ಯಂತಾಯ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಕಾರ್ಯವಾಹ ವಿನೋದ್ ಕೊಡ್ಮಾನ್, ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಸಮಿತಿ ಸದಸ್ಯರಾದ ಉಲ್ಲಾಸ್ ಕೆ.ಟಿ., ನಿವೃತ್ತ ಮುಖ್ಯಗುರುಗಳಾದ ಪದ್ಮನಾಭ ರೈ ಬೆದ್ರಾಡಿ, ಪ್ರಗತಿಪರ ಕೃಷಿಕರಾದ ಗಣೇಶ್ ರೈ ಮುಳಿಪಡ್ಪು ರವರು ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..



























