ವಿಟ್ಲ: ಕಾಳು ಮೆಣಸು ಕೊಯ್ಯಲು ಮರ ಹತ್ತಿದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ವಿಟ್ಲ ಸಮೀಪದ ಕೇಪು ಗ್ರಾಮದ ಸಾರಡ್ಕ ಎಂಬಲ್ಲಿ ನಡೆದಿದೆ.
ಮೃತರನ್ನು ಕೇಶವ ನಾಯ್ಕ್ (56) ಎಂದು ಗುರುತಿಸಲಾಗಿದೆ.

ಕೇಶವ ರವರು ಕೂಲಿ ಕೆಲಸ ಮಾಡಿಕೊಂಡಿದ್ದು, ಕೇಪು ಗ್ರಾಮದ ಸಾರಡ್ಕ ಎಂಬಲ್ಲಿ ಕೃಷ್ಣ ಉಪಾಧ್ಯ ಎಂಬವರ ಮನೆಯಲ್ಲಿ ಕಾಳು ಮೆಣಸು ಕೊಯ್ಯಲು ಮರ ಹತ್ತಿದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವ ಬಗ್ಗೆ ತಿಳಿಸಿದರು.
ಕೇಶವ ನಾಯ್ಕ್ ರವರ ಮರಣದಲ್ಲಿ ಯಾವುದೇ ಸಂಶಯವಿಲ್ಲದೆ ಇದ್ದು, ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..


























