ವಿಟ್ಲ: ಇಂಡಿಯಾ ಹಿಪ್-ಹಾಪ್ ಚಾಂಪಿಯನ್ ಶಿಫ್ -2023 ರಲ್ಲಿ ವಿಟ್ಲದ ‘ಡಾಟ್ ಡಾನ್ಸ್ ಕ್ರೀವ್’ ತಂಡವು ಸೆಮಿಫೈನಲ್ ಗೆ ಆಯ್ಕೆ ಆಗಿದ್ದು, ಮುಂಬೈನಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ ಕರ್ನಾಟಕದಲ್ಲಿ ಮೊದಲನೇ ಸ್ಥಾನವನ್ನು ತನ್ನದಾಗಿಸಿ ಕೊಂಡಿರುತ್ತದೆ.

ರಾಕೇಶ್ ವಿಟ್ಲ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ಈ ತಂಡವು ಈಗಾಗಲೇ ಹಲವು ಕಡೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದು, ಇಂಡಿಯಾ ಹಿಪ್-ಹಾಪ್ ಚಾಂಪಿಯನ್ ಶಿಫ್ -2023 ರಲ್ಲಿ ಇಂಡಿಯಾದಲ್ಲಿ ಟಾಪ್ ಟೆನ್ ಸ್ಥಾನ ಪಡೆದುಕೊಂಡಿದೆ.

ವಿಟ್ಲದ ಮೂಲದ ಈ ತಂಡವು ಇಂಡಿಯಾ ಹಿಪ್-ಹಾಪ್ ಚಾಂಪಿಯನ್ ಶಿಫ್ ನಲ್ಲಿ ಭಾಗವಹಿಸಿ ಟಾಪ್ ಟೆನ್ ಸ್ಥಾನ ಪಡೆದಿರುವುದು ಹೆಮ್ಮೆಯ ವಿಚಾರವಾಗಿದ್ದು, ಕಲಾಭಿಮಾನಿಗಳು ತಂಡದ ಸಾಧನೆಯನ್ನು ಕೊಂಡಾಡುತ್ತಿದ್ದಾರೆ. ವಿಟ್ಲದ ಹಿರಿಮೆಗೆ ಮತ್ತೊಂದು ಗರಿ ದೊರಕಿದಂತಾಗಿದೆ. ಮುಂದಿನ ದಿನಗಳಲ್ಲಿ ಈ ತಂಡ ಮತ್ತಷ್ಟು ಸಾಧನೆ ಮಾಡುವಂತಾಗಲಿ ಎಂಬುದು ನಮ್ಮ ಆಶಯ..



























