ಸುಬ್ರಹ್ಮಣ್ಯ: ಹಿಂದೂ ಅಪ್ರಾಪ್ತ ಬಾಲಕಿಯನ್ನು ಭೇಟಿಯಾಗಲು ಸುಬ್ರಹ್ಮಣ್ಯಕ್ಕೆ ಬಂದ ಮುಸ್ಲಿಂ ಹುಡುಗನಿಗೆ ಥಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತಂಡಗಳಿಂದ ದೂರು ಸಲ್ಲಿಕೆಯಾಗಿದ್ದು, ಪ್ರಕರಣ ದಾಖಲಾಗಿದೆ.
ಕಲ್ಲುಗುಂಡಿಯ ಮುಸ್ಲಿಂ ಯುವಕ ಹಲ್ಲೆಗೆ ಒಳಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿ ಹಲ್ಲೆ ನಡೆಸಿದವರ ಮೇಲೆ ದೂರು ನೀಡಿದ್ದರೆ., ಅಪ್ರಾಪ್ತ ಬಾಲಕಿಯ ತಂದೆ ಏನೂ ಅರಿಯದ ಅಪ್ರಾಪ್ತ ಬಾಲಕಿಯನ್ನು ಕೈ ಹಿಡಿದು ಮಾನಭಂಗಕ್ಕೆ ಯತ್ನಿಸಿದ್ದಾನೆ ಎಂದು ಯುವಕನ ವಿರುದ್ದ ದೂರು ನೀಡಿದ್ದಾರೆ.
ಇದೀಗ ಎರಡೂ ಪ್ರಕರಣಗಳು ದಾಖಲಾಗಿದ್ದು, ಹಲ್ಲೆ ನಡೆಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತಿರುವ ಪೊಲೀಸ್ ಅಧಿಕಾರಿಗಳು, ಮಾನಭಂಗಕ್ಕೆ ಯತ್ನಿಸಿದವರ ಮೇಲೆ ಏನೂ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ದಿಢೀರ್ ಪ್ರತಿಭಟನೆಗೆ ಸಿದ್ದತೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಜ.7 ರಂದು ಸುಬ್ರಹ್ಮಣ್ಯ ಮತ್ತು ತಾಲೂಕು ವೃತ್ತನಿರೀಕ್ಷರ ವಿರುದ್ದ
ಪೊಲೀಸರು ತಾರತಮ್ಯ ಮಾಡುತ್ತಿದ್ದಾರೆ, ದೇವಸ್ಥಾನದಂತ ಪವಿತ್ರ ಕ್ಷೇತ್ರದಲ್ಲಿ ಮಾರುವೇಷದಲ್ಲಿ ಬಂದು ಅಕ್ರಮ ಚಟುವಟಿಕೆಯಲ್ಲಿ ತೊಡಗುತ್ತಿದ್ದಾರೆ , ಆದರೂ ಪೊಲೀಸ್ ಇಲಾಖೆ ಇದನ್ನು ಹತ್ತಿಕ್ಕಲು ವಿಫಲವಾಗಿದೆ ಎಂದು ಇಲಾಖೆಯ ವಿರುದ್ದ ಆರೋಪಿಸಿ ಜ.7 ರಂದು (ಇಂದು) ಬೆಳಿಗ್ಗೆ 10.30 ಕ್ಕೆ ಪ್ರತಿಭಟನೆಗೆ ಹಿಂದೂ ಸಂಘಟನೆ ಮುಂದಾಗಿದೆ ಎಂದು ತಿಳಿದು ಬಂದಿದೆ.
ಈ ಮಧ್ಯೆ ರಾತ್ರಿ ವೇಳೆ ಸುಬ್ರಹ್ಮಣ್ಯ ಠಾಣೆಗೆ ಭೇಟಿ ನೀಡಿದ ಡಿ ವೈ ಎಸ್ ಪಿ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ..



























