ಮಂಗಳೂರು: ಕರ್ನಾಟದ ಕರಾವಳಿಯ ಪಶ್ಚಿಮ ಘಟ್ಟ, ಗ್ರಾಮಾಂತರ ಪ್ರದೇಶದಲ್ಲಿ ಸಾಕಷ್ಟು ಬಾರಿ ರಿಂಗಣಿಸಿದ್ದ ಸ್ಯಾಟಲೈಟ್ ಫೋನ್ ಇದೀಗ ಮತ್ತೆ ರಿಂಗಣಿಸಿದೆ. ಕರ್ನಾಟಕ – ಕೇರಳ ಗಡಿಯಲ್ಲಿ ಈ ಸ್ಯಾಟಲೈಟ್ ಫೋನ್ ಮತ್ತೆ ರಿಂಗಣಿಸಿ ಆತಂಕ ಸೃಷ್ಟಿಸಿದೆ.
ಕೇರಳದ ಸ್ಪೆಷಲ್ ಬ್ರಾಂಚ್ ಪೊಲೀಸ್ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ಗುಪ್ತಚರ ಸಂಸ್ಥೆಗಳು ಸ್ಯಾಟಲೈಟ್ ಫೋನ್‍ನ ಲೊಕೇಶನ್ ಟ್ರೇಸ್ ಮಾಡಿದೆ. ಕೇರಳ-ಕರ್ನಾಟಕ ಗಡಿಯ ಕಾಸರಗೋಡು, ಸ್ವರ್ಗ, ಪಾಣಾಜೆ ವ್ಯಾಪ್ತಿಯಲ್ಲಿ ಸ್ಯಾಟಲೈಟ್ ಫೋನ್ ಬಳಕೆ ಆಗಿರೋದು ಬೆಳಕಿಗೆ ಬಂದಿದೆ.
ಇತ್ತೀಚಿಗೆ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದ ವೇಳೆಯೂ ಸ್ಯಾಟಲೈಟ್ ಫೋನ್ ಸದ್ದು ಮಾಡಿದ್ದರಿಂದ ಇದೀಗ ಮತ್ತೆ ಆತಂಕ ಸೃಷ್ಟಿಯಾಗಿದೆ. ಜಿಲ್ಲೆಯಾದ್ಯಂತ ಪೊಲೀಸರು ಹೈಅಲರ್ಟ್ ಆಗಿದ್ದಾರೆ..


























