ಪುತ್ತೂರು: ಮನೆಗೆ ನುಗ್ಗಿದ ಖದೀಮರು ಟಿವಿ, ಇನ್ವರ್ಟರ್ ಬ್ಯಾಟರಿ, ಇಸ್ತ್ರಿ ಪೆಟ್ಟಿಗೆ ಮತ್ತು ಹಣ ಕಳವುಗೈದ ಘಟನೆ ಪುತ್ತೂರು ಕಸಬಾ ಗ್ರಾಮದ ಸೂತ್ರಬೆಟ್ಟು ಎಂಬಲ್ಲಿ ನಡೆದಿದೆ.

ಸೂತ್ರಬೆಟ್ಟುವಿನ ಟಿ. ಗೋಪಿ ಎಂಬವರ ಮನೆಯಿಂದ ಬೀಗ ಮುರಿದು ಟಿವಿ, ಇನ್ವರ್ಟರ್ ಬ್ಯಾಟರಿ, ಇಸ್ತ್ರಿ ಪೆಟ್ಟಿಗೆ ಮತ್ತು ಹಣ ಕಳವುಗೈದಿದ್ದು, ಖದೀಮರು ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ನಿನ್ನೆ ಅದೇ ಪರಿಸರದಲ್ಲಿ ಅಪರಿಚಿತ ವ್ಯಕ್ತಿ ತಿರುಗಾಡುತ್ತಿದ್ದುದ್ದನ್ನು ಸ್ಥಳೀಯರು ಗಮನಿಸಿ ವಿಚಾರಿಸಿದಾಗ ತಪ್ಪು ತಪ್ಪು ಮಾಹಿತಿ ನೀಡಿದ್ದು, ಆತ ಬಂದಿದ್ದ ವಾಹನದಲ್ಲಿ ನಂಬರ್ ಪ್ಲೇಟ್ ಸಹ ಇಲ್ಲದ್ದನ್ನು ಗಮನಿಸಿದ ಸ್ಥಳೀಯರು ಆತನನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿತ್ತು.
ಇಂತಹ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪೊಲೀಸರು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ..



























