ಪುತ್ತೂರು: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ರವರ ಮನೆಗೆ ಖ್ಯಾತ ವಕೀಲರಾದ ಮೀರಾ ರಾಘವೇಂದ್ರ ರವರು ಜ.8 ರಂದು ಭೇಟಿ ನೀಡಿದರು.

ಪ್ರವೀಣ್ ನೆಟ್ಟಾರು ರವರ ಮನೆಗೆ ಭೇಟಿ ನೀಡಿದ ಮೀರಾ ರಾಘವೇಂದ್ರ ರವರು ಮನೆಯವರಿಗೆ ಸಾಂತ್ವನ ಹೇಳಿ, ಅವರ ಯೋಗಕ್ಷೇಮವನ್ನು ವಿಚಾರಿಸಿದರು. ಪ್ರವೀಣ್ ರವರ ಭಾವಚಿತ್ರವನ್ನು ಮನೆಯವರಿಗೆ ನೀಡಿದರು.

ಈ ಸಂದರ್ಭದಲ್ಲಿ ಸಂಘ ಪರಿವಾರದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು..




























