ಹೆಬ್ರಿ : ರಾಜ್ಯ ಮಟ್ಟದ ಕ್ರಿಕೆಟ್ ಆಟಗಾರ ಪೆರ್ಡೂರು ಬುಕ್ಕಿಗುಡ್ಡೆ ರಕ್ಷಿತ್ ಶೆಟ್ಟಿ (29) ಬ್ರೈನ್ ಟ್ಯೂಮರ್ ನಿಂದ ಜ.8 ರಂದು ನಿಧನರಾದರು.

ಗೆಳೆಯರ ಬಳಗ ಪೆರ್ಡೂರು ತಂಡದ ಮೂಲಕ ಕ್ರಿಕೆಟ್ ಆಟವನ್ನು ಆರಂಭಿಸಿದ ರಕ್ಷಿತ್ ಶೆಟ್ಟಿ ವಿವಿಧ ತಂಡಗಳಲ್ಲಿ ಜಿಲ್ಲಾಮಟ್ಟದ ಪಂದ್ಯಗಳಲ್ಲಿ ಆಟವಾಡಿ ಉತ್ತಮ ಕ್ರಿಕೆಟಿಗನಾಗಿ ಹೊರಹೊಮ್ಮಿದ್ದರು.
ಎಸ್.ಝಡ್.ಸಿ.ಸಿ ಮತ್ತು ಎಮ್.ಬಿ.ಸಿ.ಸಿ ತಂಡಗಳ ಪರವಾಗಿ ತನ್ನ ಆಕರ್ಷಕ ಶೈಲಿಯ ಬೌಲಿಂಗ್ ನಿಂದ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದ್ದರು..




























