ಮಹೀಂದ್ರಾ ಕಂಪನಿಯ ಥಾರ್‌ಗೆ ಭಾರೀ ಡಿಮ್ಯಾಂಡ್ ಇದೆ ಎಂಬ ಸಂಗತಿ ಎಲ್ಲರಿಗೂ ಗೊತ್ತಿದೆ. ಆದರೀಗ ಆಫ್ ರೋಡ್ ವಿಭಾಗದಲ್ಲಿರುವ ಮಹೀಂದ್ರಾ ಕಂಪನಿ ಹೊಸ ಥಾರ್ 2WD ಅನ್ನು ಪರಿಚಯಿಸಿದೆ. ಅದರಲ್ಲೂ 9.99 ಲಕ್ಷ ಆರಂಭಿಕ ಬೆಲೆಗೆ ಗ್ರಾಹಕರ ಮುಂದಿರಿಸಿದೆ.
ಹೊಸ ಥಾರ್ 2WD ಟಾಪ್ ಸ್ಪೆಕ್ ರೂಪಾಂತರದ ಬೆಲೆ 13.49 ಲಕ್ಷ ರೂಪಾಯಿ ಆಗಿದ್ದು, ಹೊಸ ಶ್ರೇಣಿಯ ಈ ವಾಹನ ಎರಡು ಇಂಜಿನ್ ಆಯ್ಕೆಯಲ್ಲಿ ರಿಯರ್ ವೀಲ್ ಡ್ರೈವ್ ರೂಪಾಂತರದಲ್ಲಿ ಮತ್ತು ಫೋರ್ ವೀಲ್ ಡ್ರೈವ್ ರೂಪಾಂತರದಲ್ಲಿ ಗ್ರಾಹಕರಿಗೆ ಸಿಗಲಿದೆ.

ಮಹೀಂದ್ರ ಥಾರ್ 2WD: ಬೆಲೆ
AX (0) RWD ಡೀಸೆಲ್ MT ಹಾರ್ಡ್ ಟಾಪ್ 9.99
ಲಕ್ಷ ರೂ
LX RWD ಡೀಸೆಲ್ MT ಹಾರ್ಡ್ ಟಾಪ್- 10.99 ಲಕ್ಷ ರೂ
LX RWD ಪೆಟ್ರೋಲ್ ಎಟಿ ಹಾರ್ಡ್ ಟಾಪ್- 13.49 ಲಕ್ಷ ರೂ
ಎಂಜಿನ್ ವಿಶೇಷತೆ:
ಹೊಸ ಮಹೀಂದ್ರಾ ಥಾರ್ ಆರ್ ಡಬ್ಯೂಡಿ ಶ್ರೇಣಿಯ ಡಿಸೇಲ್ ರೂಪಾಂತರದಲ್ಲಿ ಸಿಗುತ್ತಿದ್ದು, ಡಿ117 ಸಿಆರ್‌ಡಿಇ ಎಂಜಿನ್‌ನಿಂದ ಚಾಲಿತವಾಗಿದೆ. ಇನ್ನು ಮ್ಯಾನುಯೆಲ್ ಟ್ರಾನ್ಸ್‌ಮಿಷನ್‌ನೊಂದಿಗೆ 117 ಬಿಎಚ್‌ಪಿ ಪವರ್ ಮತ್ತು 300 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಆರ್‌ಡಬ್ಲುಡಿ ಶ್ರೇಣಿಯ ಪೆಟ್ರೋಲ್ ರೂಪಾಂತರವು mstallion 150 TGDi ಎಂಜಿನ್ ಹೊಂದಿದ್ದು, ಸ್ವಯಂಚಾಲಿತವಾಗಿಗೂ ಚಲಿಸುವ ಆಯ್ಕೆಯಿದೆ. ಇದು 150 ಬಿಎಚ್‌ಪಿ ಪವರ್ ಮತ್ತು 320ಎನ್ಎಮ್ ಟಾರ್ಕ್ ಉತ್ಪಾದಿಸುತ್ತದೆ.
4ಡಬ್ಲುಡಿ ಪವರ್‌ಟ್ರೈನ್ ವಾಹನದ ಲೈನ್ ಅಪ್ ಬದಲಾಗದೆ ಹಾಗೆಯೇ ಇದೆ. ಈ ವಾಹನ 2.0l mStallion 150 TGDi ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ. 150ಬಿಎಚ್‌ಪಿ ಪವರ್ ಮತ್ತು 320 ಎನ್ಎಮ್ ಟಾರ್ಕ್ ಉತ್ಪಾದಿಸುತ್ತದೆ.
ಇನ್ನು 2.2L mHawk 130 ಡೀಸೆಲ್ ಎಂಜಿನ್, 130 bhp ಪವರ್ ಮತ್ತು 300 ಎನ್ಎಮ್ ಟಾರ್ಕ್ ಉತ್ಪಾದಿಸುತ್ತದೆ. ಈ ಎರಡು ಎಂಜಿನ್‌ಗಳನ್ನು ಹೊಂದಿರುವ ಹೊಸ ಥಾರ್ 6 ಸ್ಪೀಡ್ ಮ್ಯಾನುಯೆಲ್ ಗೇರ್ ಬಾಕ್ಸ್ ಹೊಂದಿದೆ.
ಬಣ್ಣ:
ಹೊಸ ಥಾರ್ 2ಡಬ್ಲುಡಿ ಬ್ಲೇಜಿಂಗ್ ಬ್ರೋಂಜ್ ಮತ್ತು ಎವರೆಸ್ಟ್ ವೈಟ್ ಬಣ್ಣದಲ್ಲಿ ಸಿಗಲಿದೆ.
ಸುರಕ್ಷತೆ:
ಹೊಸ ಥಾರ್‌ನಲ್ಲಿ ರೋಲ್ ಕೇಜ್, ಇಎಸ್‌ಪಿ, ಎಬಿಎಸ್ ಮತ್ತು ಏರ್‌ಬ್ಯಾಗ್‌ಗಳನ್ನು ನೀಡಲಾಗಿದೆ. ಗ್ಲೋಬರ್ ಎನ್ ಸಿಎಪಿ ಕಡೆಯಿಂದ ವಯಸ್ಕ ಮತ್ತು ಮಕ್ಕಳ ಸುರಕ್ಷತೆಯ ವಿಚಾರವಾಗಿ 4 ಸ್ಟಾರ್ ಪಡೆದುಕೊಂಡಿದೆ..




























