ಪುತ್ತೂರು : ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ಬಳಿಕ ಜನರ ತುಂಬಾ ಸಂಕಷ್ಟಕ್ಕೆ ಈಡಾಗಿದ್ದಾರೆ.
ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೆ ಏರಿದೆ, ಇದರಿಂದ ಜನ ಸಾಮಾನ್ಯರ ಬದುಕು ದುಸ್ತರವಾಗಿದೆ. ಇದೀಗ ಅಡಿಕೆ ಕೃಷಿಯನ್ನೇ ನಾಶಮಾಡಲು ಹೊರಟಿರುವ ಬಿಜೆಪಿ ಅಡಿಕೆ ಬೆಳೆಗಾರರ ಹಾಗೂ ಜಿಲ್ಲೆಯ ಕ್ರಷಿ ಕೂಲಿ ಕಾರ್ಮಿಕರ ಬದುಕಿಗೆ ಕೊಳ್ಳಿ ಇಡಲು ಹೊರಟಿದೆ ಈ ರೀತಿ ಅಡಿಕೆ ಬೆಳೆಗಾರರಿಗೆ, ಕೃಷಿ ಕಾರ್ಮಿಕರಿಗೆ ಹಾಗೂ ಜನ ಸಾಮಾನ್ಯರಿಗೆ ಬಿಜೆಪಿ ಮಾಡುತ್ತಿರುವ ಅನ್ಯಾಯದ ಬಗ್ಗೆ ಜನತೆಗೆ ತಿಳಿಸಿ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಟಿ ಶೆಟ್ಟಿ ಕರೆ ನೀಡಿದರು.

ಅವರು ನಗರ ಕಾಂಗ್ರೆಸ್ ನ ಚಿಕ್ಕಮುಡ್ನೂರು ವಲಯದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಅಲಿ, ಚುನಾವಣೆ ಹತ್ತಿರ ಬರುವ ಈ ಸಂದರ್ಭದಲ್ಲಿ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ, ಇದರಂತೆ ಅಭ್ಯರ್ಥಿಗಳು ಯಾರೆಂದು ತಲೆಗೆಡಿಸಿ ಗೊಳ್ಳದೆ, ಪಕ್ಷ ಗೆಲ್ಲಬೇಕೆಂದು ಕೆಲಸ ಮಾಡುವ ಕಾರ್ಯಕರ್ತರ ತಂಡವನ್ನು ಕಟ್ಟುವ ಜವಾಬ್ದಾರಿ ನಮ್ಮ ಮೇಲಿದೆ, ನಾವೆಲ್ಲರು ಒಗ್ಗಟ್ಟಾಗಿ ಕೆಲಸಮಾಡಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸೋಣ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ, ಕಾರ್ಯಕರ್ತರೆ ಪಕ್ಷದ ಆಧಾರ ಸ್ತಂಭ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ನಾಯಕರು ಮಾಡಬೇಕು, ಕಾರ್ಯಕರ್ತರನ್ನು ಕಡೆಗಣಿಸಿದರೆ ಚುನಾವಣೆಯಲ್ಲಿ ಯಾರೂ ಗೆಲ್ಲಲು ಸಾಧ್ಯವಿಲ್ಲ,ನನ್ನ ನೇತೃತ್ವದ ಬ್ಲಾಕ್ ಕಾಂಗ್ರೆಸ್ ಸಮಿತಿಯು ಕಾರ್ಯಕರ್ತರನ್ನೂ ಯಾವತ್ತು ಬಿಟ್ಟು ಕೊಡುವುದಿಲ್ಲ ಎಂದು ಹೇಳಿದರು.
ನಗರ ಕಾಂಗ್ರೆಸ್ ಉಪಾಧ್ಯಕ್ಷ ಮಂಜುನಾಥ್ ಕೆಮ್ಮಾಯಿ ರವರ ಮನೆಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಕಳೆದ ನಗರ ಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ ನಾಗೇಶ್ ಆಚಾರ್ಯ, ಹಾಗೂ ಕಾಂಗ್ರೆಸ್ ಮುಖಂಡರಾದ ಹರೀಶ್ ಆಚಾರ್ಯ ಸಿದ್ಯಾಲ,ಸಂತೋಷ್, ನವೀನ್ ಕೃಷ್ಣನಗರ,ವಾಲ್ಟರ್ ಡಿ ಸೋಜಾ ಸಿದ್ಯಾಲ,ಮೌರಿಸ್ ಕುಟಿನ ರಾಗಿದಕುಮೇರು,ಯೂಸುಫ್ ಎಸ್ ಸಿ ಎಸ್, ನಗರ ಸಭಾ ಸದಸ್ಯ ಶಕ್ತಿಸಿನ್ಹ ಮೊದಲಾದವರು ಪಕ್ಷ ಸಂಘಟನೆಯ ಬಗ್ಗೆ ಹಲವಾರು ಸಲಹೆ ಸೂಚನೆಗಳನ್ನು ನೀಡಿ ಪಕ್ಷದಲ್ಲಿ ಅಧಿಕಾರವನ್ನು ಅನುಭವಿಸಿ ಲಾಭ ಪಡಕೊಂಡವರು ಈಗ ಎಲ್ಲಿದ್ದಾರೆ.? ನಾಳೆ ಪಕ್ಷ ಅಧಿಕಾರಕ್ಕೆ ಬಂದರೆ ಅಂತವರಿಗೆ ಯಾವ ಅವಕಾಶವನ್ನು ನೀಡಬಾರದು, ಕಷ್ಟದ ಸಮಯದಲ್ಲಿ ಯಾರೂ ಪಕ್ಷದ ಕೆಲಸ ಮಾಡಿದ್ದಾರೋ ಅವರಿಗೆ ಮಾತ್ರ ಮನ್ನಣೆ ನೀಡಬೇಕೆಂದು ಆಗ್ರಹಿಸಿದರು.
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ನಗರ ಕಾಂಗ್ರೆಸ್ ನ ಚಿಕ್ಕಮುಡ್ನೂರು ವಲಯದ ಉಸ್ತುವಾರಿ ಮೌರಿಸ್ ಮಸ್ಕರೇನಸ್ ಸ್ವಾಗತಿಸಿ, ನನಗೆ ಈ ಭಾಗದ 6 ನಗರ ಸಭಾ ವಾರ್ಡಿನ ಜವಾಬ್ದಾರಿ ನೀಡಿದ್ದು, ಇಲ್ಲಿಯ 7 ಬೂತ್ ಗಳಲ್ಲಿ ಪಕ್ಷ ಸಂಘಟನೆಯ ಕೆಲಸ ಮಾಡಬೇಕಾಗಿದೆ , ಈ ವಲಯದ ಕಾರ್ಯಕರ್ತರು ಸಹಕಾರ ನೀಡಬೇಕು ಎಂದು ಹೇಳಿದರು.
ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಕೋಶಾಧಿಕಾರಿ ವಲೇರಿಯನ್ ಡಯಾಸ್,ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ವಿ ಎಚ್ ಶಕೂರು ಹಾಜಿ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸಿರಿಲ್ ರೋಡ್ರಿಗಸ್,ನಗರ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿಗಳಾದ ದಾಮೋದರ ಭಂಡಾರ್ಕರ್, ಯೂಸುಸ್ ತಾರಿಗುಡ್ಡೆ, ಕಾರ್ಯದರ್ಶಿಗಳಾದ ಮೌರಿಸ್ ಕುಟಿನ ರಾಗಿದಕುಮೇರು ,ಕೃಷ್ಣಪ್ಪ ಪೂಜಾರಿ ನೆಕ್ಕರೆ ಬೆದ್ರಾಳ,ಸ್ಯೆಮನ್ ಗೊನ್ಸಾಲ್ವಿಸ್ ಕೃಷ್ಣನಗರ, ದಿವ್ಯವಸಂತ ಬಡಾವು, ಭಾರತಿ ಪ್ರವೀಣ್ ಬಡಾವು, ಹಕೀಮ್ ಕೆಮ್ಮಾಯಿ, ಬಾಲಪ್ಪಗೌಡ ಬನ್ನೂರು, ಐವಾನ್ ಡಿ ಸೋಜಾ ಸಿದ್ಯಾಲ, ಲ್ಯಾನ್ಸಿ ಪಾಯ್ಸ್ ಬಳಕ್ಕ, ತೋಮ್ಸನ್ ಕೃಷ್ಣನಗರ, ಅನಿಲ್ ಕೃಷ್ಣನಗರ, ರೊನಾಲ್ಡ್ ಪಿಂಟೋ ಕೃಷ್ಣನಗರ, ಅಲೆಕ್ಸ್ ಗೊನ್ಸಾಲ್ವಿಸ್ ಕೃಷ್ಣನಗರ, ತುಳಸಿ ಮಂಜುನಾಥ್, ವಿಲ್ಸನ್ ಸಿದ್ಯಾಲ ಮೊದಲಾದವರು ಉಪಸ್ಥಿತರಿದ್ದರು.
ಕೃಷ್ಣನಗರ ಬೂತ್ ನಲ್ಲಿ ಪಕ್ಷ ಸಂಘಟನೆ ಹಾಗೂ ಬೂತ್ ಸಮಿತಿ ರಚನೆಯ ಜವಾಬ್ದಾರಿಯನ್ನು ಮಂಜುನಾಥ್ ಕೆಮ್ಮಾಯಿ, ನಾಗೇಶ್ ಆಚಾರ್ಯ,ಹರೀಶ್ ಆಚಾರ್ಯ, ನವೀನ್ ಕೃಷ್ಣನಗರ,ವಾಲ್ಟರ್ ಡಿ ಸೋಜಾ, ಸಂತೋಷ್, ಹಕೀಮ್ ಕೆಮ್ಮಾಯಿ,ಸ್ಯೆಮನ್ ಗೊನ್ಸಾಲ್ವಿಸ್, ಯೂಸುಫ್ ಕೆಮ್ಮಾಯಿ, ಐವಾನ್ ಡಿ ಸೋಜಾ, ದಿವ್ಯವಸಂತ, ಭಾರತಿ ಪ್ರವೀಣ್ ರವರ ತಂಡಕ್ಕೆ ನೀಡಲಾಯಿತು.



























