ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ವತಿಯಿಂದ ಸರಕಾರಿ ಪ್ರೌಢಶಾಲೆ RMSA ವಿಟ್ಲ –ಪ್ರಾಥಮಿಕ ವಿಭಾಗ 2 ಕಂಪ್ಯೂಟರ್ ಕೊಡುಗೆ ನೀಡಲಾಯಿತು.

ಅಧ್ಯಕ್ಷರಾದ ರೊಟೇರಿಯನ್ ಸಾಯಿಬಾಬ ರಾವ್ ಹಾಗೂ ಸಹಾಯಕ ಗವರ್ನರ್ ರೊಟೇರಿಯನ್ ರಾಜಗೋಪಾಲ್ ರೈ ಉದ್ಘಾಟಿಸಿದರು,
ಸದಸ್ಯರಾದ ರೊಟೇರಿಯನ್ ರಾಜೇಶ್ ಶೆಟ್ಟಿ, ಶ್ರೀನಿಧಿ ಕಂಪ್ಯೂಟರ್ ಮಾಲಕರಾದ ರೊಟೇರಿಯನ್ ರಾಜೇಶ್ ಸೀತಾರಾಮ, ರೊಟೇರಿಯನ್ ರಾಮಶೇಷ ಶೆಟ್ಟಿ ಹಾಗೂ ವಿಟ್ಲ ಪಟ್ಟಣ ಪಂಚಾಯತ್ ಕೌನ್ಸಿಲರ್ ರವಿಪ್ರಕಾಶ್ ವಿಟ್ಲ ಉಪಸ್ಥಿತರಿದ್ದರು.

ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸದಸ್ಯರು, ಶಿಕ್ಷಕವೃಂದ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.



























