ಪುತ್ತೂರು: ಮನೆಗೆ ನುಗ್ಗಿದ ಖದೀಮರು ಟಿವಿ, ಇನ್ವರ್ಟರ್ ಬ್ಯಾಟರಿ, ಇಸ್ತ್ರಿ ಪೆಟ್ಟಿಗೆ ಮತ್ತು ಹಣ ಕಳವುಗೈದ ಘಟನೆ ಪುತ್ತೂರು ಕಸಬಾ ಗ್ರಾಮದ ಸೂತ್ರಬೆಟ್ಟುವಿನಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸವಣೂರು ನಿವಾಸಿ ಸಮೀರ್ ಚಾಪಳ್ಳ, ಕೂರ್ನಡ್ಕ ನಿವಾಸಿ ಮುಸ್ತಾಫ ಬಂಧಿತರು.
ಸೂತ್ರಬೆಟ್ಟುವಿನ ಟಿ. ಗೋಪಿ ಎಂಬವರ ಮನೆಗೆ ನುಗ್ಗಿ ಟಿವಿ, ಇನ್ವರ್ಟರ್ ಬ್ಯಾಟರಿ, ಇಸ್ತ್ರಿ ಪೆಟ್ಟಿಗೆ ಮತ್ತು ಹಣ ಕಳವುಗೈದ ಖದೀಮರು ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಪುತ್ತೂರು ನಗರ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಆಕ್ಟಿವಾ ಹಾಗೂ ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ವಿರುದ್ಧ ಈ ಮೊದಲೇ ಪುತ್ತೂರು ನಗರ ಮತ್ತು ಗ್ರಾಮಾಂತರ ಠಾಣೆಗಳಲ್ಲಿ ಹಲವು ಕಳವು ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.



























