ಪುತ್ತೂರು : ಬ್ರಹ್ಮಕಲಶೋತ್ಸವದ ಸಿದ್ಧತೆಯಲ್ಲಿರುವ ಕೋಟಿ ಚೆನ್ನಯರ ಮೂಲಸ್ಥಾನ ಪಡುಮಲೆ ಕ್ಷೇತ್ರಕ್ಕೆ ಏ.19 ರಂದು ಬ್ರಹ್ಮ ಕಲಶೋತ್ಸವ ಅಧ್ಯಕ್ಷರೂ, ಹಾಗೂ ಸಂಸದರೂ ಆಗಿರುವಂತ ನಳಿನ್ ಕುಮಾರ್ ಕಟೀಲ್ ರವರು ಆಗಮಿಸಿ ತಯಾರಿಗಳ ಕುರಿತು ವೀಕ್ಷಣೆ ಮಾಡಿದರು.
ಈ ಸಮಯದಲ್ಲಿ ಇಂದು ಅರಳಿದ ಸ್ವರ್ಣ ಕೇದಗೆಯನ್ನು ಹರಿಕೃಷ್ಣ ಬಂಟ್ವಾಳ್ ರವರು ಶಾಸಕರಿಗೆ ಉಡುಗೊರೆ ನೀಡಿದರು.
ಈ ಸಂದರ್ಭದಲ್ಲಿ ಪಡುಮಲೆ ಕೋಟಿಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ನ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಉಪಾಧ್ಯಕ್ಷರಾದ ವಿಜಯಕುಮಾರ್ ಸೊರಕೆ,ಪ್ರವರ್ತಕ ಚರಣ್, ಪ್ರಧಾನ ಕಾರ್ಯದರ್ಶಿ ಸೀತಾರಾಮ ರೈ ಕೆದಂಬಾಡಿಗುತ್ತು,ಸಂಚಾಲಕ ರತನ್ ನಾಯಕ್ ಕರ್ನೂರು, ವೇದನಾಥ ಸುವರ್ಣ,ಸತೀಶ್ ರೈ ಚೆಲ್ಯಡ್ಕ,ಶೈಲೇಶ್ ಬೆಳ್ತಂಗಡಿ, ರತನ್ ಕುಮಾರ್ ಕರ್ನೂರು ಗುತ್ತು, ಚರಣ್ ಬೆಳ್ತಂಗಡಿ, ಬ್ರಹ್ಮಕಲಶೋತ್ವವ ಸಮಿತಿ ಪ್ರಧಾನ ಕಾರ್ಯದರ್ಶಿ ಸೀತಾರಾಮ ರೈ ಕೆದಂಬಾಡಿ ಗುತ್ತು ಕಾರ್ಯದರ್ಶಿ ಚಿನ್ಮಯಿ ಈಶ್ವರಮಂಗಲ , ಅಜಿತ್ ರೈ ಹೊಸಮನೆ, ಸುರೇಶ್ ಆಳ್ವ ಪುತ್ತೂರು ಯುವ ಉದ್ಯಮಿ ನವೀನ,ಶೆಟ್ಟಿ ಬಡಗನ್ನೂರು ಗ್ರಾ.ಪಂ ಉಪಾಧ್ಯಕ್ಷ ಸಂತೋಷ್ ಆಳ್ವ, ಜಿಕೆ ಸುವರ್ಣ ಗಣಸಿನಕುಮೆರು, ಗುರುಪ್ರಸಾದ್ ರೈ ಕುದ್ಕಾಡಿ ಮೊದಲಾದವರು ಉಪಸ್ಥಿತರಿದ್ದರು.