ಕಡಬ: ಸ್ನಾನಕ್ಕೆಂದು ನದಿಗೆ ಇಳಿದ ಯುವಕರಿಬ್ಬರುಮುಳುಗಿ ಮೃತಪಟ್ಟ ದಾರುಣ ಘಟನೆ ಸೋಮವಾರಸಂಜೆ ಕಡಬ ತಾಲೂಕಿನ ಇಚಿಲಂಪಾಡಿಯಲ್ಲಿ ನಡೆದಿದೆ.
ಮೃತ ಯುವಕರನ್ನು ನೆಲ್ಯಾಡಿ ಶಾಂತಿಬೆಟ್ಟು ನಿವಾಸಿಉಮ್ಮರ್ ಎಂಬವರ ಪುತ್ರ ಝಾಕಿರ್(20) ಹಾಗೂಸಹೋದರಿಯ ಪುತ್ರ ಉಪ್ಪಿನಂಗಡಿ ಸಮೀಪದಸರಳೀಕಟ್ಟೆ ನಿವಾಸಿ ಸಿನಾನ್ ಎಂದು ಗುರುತಿಸಲಾಗಿದೆ.ಈ ಯುವಕರು ಸ್ನಾನ ಮಾಡಲು ಇಚಿಲಂಪಾಡಿಸೇತುವೆ ಸಮೀಪದ ನದಿಗೆ ಇಳಿದಿದ್ದು, ನೀರಿನಲ್ಲಿಮುಳುಗಿ ಮೃತಪಟ್ಟಿದ್ದಾರೆ. ವಿಷಯ ತಿಳಿದಸ್ಥಳೀಯರು ನದಿಗಿಳಿದು ಇಬ್ಬರ ಮೃತದೇಹಗಳನ್ನುಮೇಲಕ್ಕೆ ಎತ್ತಿದರು. ಸ್ಥಳಕ್ಕೆ ಕಡಬ ಠಾಣೆ ಪೊಲೀಸರುಭೇಟಿ ನೀಡಿ, ಪರಿಶೀಲನೆ ನಡೆಸಿದರು.